ಮಹಿಳಾ ಹರಿದಾಸ ಸಾಹಿತ್ಯ ಅಧ್ಯಯನ ಅಗತ್ಯ

Kannada Bhavan
Published on

ಕಲಬುರಗಿ: ಕಡೆಗಣನೆಗೆ ಒಳಗಾಗಿರುವ ಮಹಿಳಾ ಹರಿದಾಸ ಸಾಹಿತ್ಯ, ಕೀರ್ತನೆಗಳ ಆಳ ಅಧ್ಯಯನದ ಅವಶ್ಯಕತೆ ಇದೆ ಎಂದು ಹರಿದಾಸ ಸಾಹಿತ್ಯ ವಿದ್ವಾಂಸ ಗುಂಡೂರು ಪವನಕುಮಾರ ಹೇಳಿದರು.
ಕಲಬುರಗಿಯ ದಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಲಕ್ಷ್ಮೀಬಾಯಿ ಕೃಷ್ಟಾಚಾರ್ ಜೋಶಿ ಗುಡುಗುಂಟಿ ಸ್ಮರಣಾರ್ಥ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಹರಿದಾಸರ ಸಮಗ್ರ ಸಾಹಿತ್ಯವನ್ನು ಪ್ರತ್ಯೇಕವಾಗಿ ಮುದ್ರಿಸಿದರೆ ಸುಮಾರು ೧೦೦ ಸಂಪುಟ ಆಗುವಷ್ಟು ಸಮೃದ್ಧ ಸಾಹಿತ್ಯ ಸಿಗಲಿದೆ ಎಂದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೃಷ್ಣನ ಭಕ್ತಿ ಹಾಗೂ ಕೃಷ್ಣಪ್ರಜ್ಞೆ ಕುರಿತು ಭಾವ ಪ್ರಪಂಚಕ್ಕೆ ಕರೆದೊಯ್ಯಬಲ್ಲ ಅದ್ಭುತ ಸಾಹಿತ್ಯವನ್ನು ಮಹಿಳಾ ಹರಿದಾಸರು ರಚಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಲಗಲಿ ಅವ್ವ, ಹರಪನಹಳ್ಳಿ ಭೀಮವ್ವ, ಹೆಳವನಕಟ್ಟೆ ಗಿರಿಯಮ್ಮ, ನಿಡಗುರಕಿ ಜೀವೂಬಾಯಿ ಇತರ ಮಹಿಳಾ ಹರಿದಾಸರ ಕೀರ್ತನೆಗಳ ಅಧ್ಯಯನ, ಪ್ರಕಟಣೆ ಸದ್ಯದ ಜರೂರಿಯಾಗಿದೆ ಎಂದು ಪ್ರತಿಪಾದಿಸಿದರು.
ಮಹಿಳಾ ಹರಿದಾಸರ ವೈಯಕ್ತಿಕ ಬದುಕು ಅತ್ಯಂತ ಕಷ್ಟಕರವಾಗಿದ್ದರೂ ಬಡತನದ ಅಡೆ-ತಡೆಗಳ ಮಧ್ಯೆಯೂ ಅದ್ಭುತ ಸಾಹಿತ್ಯ ಕೃಷಿ ಮಾಡಿz್ದÁರೆ. ಅವರ ಜೀವನ ನವ ಯುವಕ ಯುವತಿಯರಿಗೆ ಪ್ರೇರಣೆಯಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಇಂದಿನ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಯಶಸ್ಸಿನ ತುದಿ ಮುಟ್ಟುತ್ತಿz್ದÁಳೆ. ಅವಳಿಗೆ ಸಮಾಜದ ಸ್ವಲ್ಪ ಸಹಕಾರ ಸಿಕ್ಕರೂ ದೊಡ್ಡ ದೊಡ್ಡ ಕೆಲಸ ಮಾಡಬಹುದು. ಅಕ್ಕಮಹಾದೇವಿ, ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರ ಬದುಕು, ಸಾಹಿತ್ಯ ಮತ್ತು ಸಾಧನೆ ಕುರಿತು ವ್ಯಾಪಕವಾಗಿ ಚರ್ಚೆಯಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಬಾಲ್ಯದಲ್ಲಿ ಸಾಕಿ ಸಲುಹಿದ ಆಯಿ (ತಾಯಿಯ ತಾಯಿ) ವಾತ್ಸಲ್ಯಕ್ಕೆ ತಮ್ಮ ಕಿಂಚಿತ್ ಋಣವನ್ನು ಈ ದತ್ತಿ ಸ್ಥಾಪಿಸುವ ಮೂಲಕ ತೀರಿಸುವ ಪ್ರಯತ್ನ ಮಾಡಿz್ದೆÃನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ, ದಾಸ ಸಾಹಿತ್ಯ ಮಡಿವಂತಿಕೆ ಸಾಹಿತ್ಯವಲ್ಲ, ಕೇವಲ ಒಂದು ಸಮುದಾಯಕ್ಕೆ ಸೇರಿದ ಸಾಹಿತ್ಯವೂ ಅಲ್ಲ. ಅದು ಸಮಾಜದ ಎಲ್ಲ ವರ್ಗದವರಿಗೂ ಸೇರಿದ್ದು. ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳುವುದು ತರವಲ್ಲ ಎಂದು ಹೇಳಿದರು.
ಶ್ರೀಲಕ್ಷಿö್ಮÃ ದೇಶಪಾಂಡೆ ಪ್ರಾರ್ಥಿಸಿದರು. ಪಿಡಿಎ ಇಂಜಿನಿಯರಿAಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ವ್ಯಾಸರಾಜ ಸಂತೆಕೆಲ್ಲೂರ ಅತಿಥಿ ಪರಿಚಯ ಮಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ವಂದಿಸಿದರು. ಸಂಚಾಲಕ ಸಂಜೀವ ಸಿರನೂರಕರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net