ಗಂಜಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

09 Shashi 02
Published on

ರಾಯಚೂರು: ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ ಘಟನೆ ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬೃಹತ್ ಆಕಾರದ ಮೊಸಳೆಯನ್ನು ಮೀನುಗಾರರು ಹಾಗೂ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಗಂಜಳ್ಳಿ ಗ್ರಾಮವು ಕೃಷ್ಣಾನದಿಗೆ ಸಮೀಪವಿರುವ ಕಾರಣ ಪ್ರವಾಹದ ಸಂದರ್ಭದಲ್ಲಿ ನದಿ ನೀರಿನ ಜತೆಗೆ ಮೊಸಳೆ ಕೆರೆಗೆ ಬಂದಿರಬಹುದೆಂದು ಶಂಕಿಸಲಾಗಿದೆ. ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net