ರಾಯಚೂರು ಜಿಲ್ಲೆಯಾದ್ಯಂತ ಭಕ್ತಿ, ಶ್ರದ್ಧೆಯಿಂದ ರಂಜಾನ್ ಆಚರಣೆ

Raichur Ramzan Prayer
ರಾಯಚೂರಿನ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಶನಿವಾರ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
Published on

ರಾಯಚೂರು: ರಂಜಾನ್ ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಶನಿವಾರ ಆಚರಿಸಲಾಯಿತು. ಒಂದು ತಿಂಗಳ ಕಾಲ ಉಪವಾಸ ಆಚರಿಸಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ವ್ರತವನ್ನು ಅಂತ್ಯಗೊಳಿಸಿದರು.ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ನಂತರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.

ನಂತರ ಮನೆಗಳಿಗೆ ತೆರಳಿ ಹಬ್ಬದ ವಿಶೇಷ ಅಡುಗೆಯನ್ನು ಸವಿದರು. ಈ ಸಂದರ್ಭ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಮಾಜಿ ಶಾಸಕ ಸೈಯದ್ ಯಾಸೀನ್, ಮುಖಂಡರಾದ ರವಿ ಬೋಸರಾಜು, ಈ.ವಿನಯಕುಮಾರ, ಎಂ.ವಿರುಪಾಕ್ಷಿ, ಮಹ್ಮದ್ ಶಾಲಂ, ಡಿ.ವೀರೇಶಕುಮಾರ, ಸುಭಾಷಚಂದ್ರ ಸಂಭಾಜಿ, ಕೆ.ಶಾಂತಪ್ಪ, ರವೀಂದ್ರ ಜಲ್ದಾರ್, ದೇವಣ್ಣ ನಾಯಕ, ಸಾಜೀದ್ ಸಮೀರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net