More

    ರಂಜಾನ್​ ಹಿನ್ನೆಲೆ ಯೆಮೆನ್​ನಲ್ಲಿ ನಡೆದ ಚಾರಿಟಿ ಈವೆಂಟ್​ನಲ್ಲಿ ಕಾಲ್ತುಳಿತ: 85 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

    ಸನಾ: ಯುದ್ಧ ಪೀಡಿತ ಯಮೆನ್​​ನಲ್ಲಿ ರಂಜಾನ್​ ಪ್ರಯುಕ್ತ ನಡೆಯುತ್ತಿದ್ದ ಚಾರಿಟಿ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಸುಲುಕಿ 85 ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ರಂಜಾನ್​ನಲ್ಲೇ ದುರಂತ
    ಈ ಘಟನೆ ಗುರುವಾರ ಮುಂಜಾನೆ ನಡೆದಿದೆ. ದಶಕಗಳಲ್ಲೇ ಇದು ಅತ್ಯಂತ ಮಾರಣಾಂತಿಕ ಕಾಲ್ತುಳಿತ ಎಂದು ಹುಥಿ ಅಧಿಕಾರಿಗಳು ತಿಳಿಸಿದ್ದಾರೆ. ಅರೇಬಿಯನ್ ಪೆನಿನ್ಸುಲಾದ ಬಡ ದೇಶದಲ್ಲಿ ಮುಸ್ಲಿಂ ಪವಿತ್ರ ತಿಂಗಳು ರಂಜಾನ್​ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಯಮೆನ್​ ರಾಜಧಾನಿ ಸನಾದ ಬಾಬಾ ಎಲ್​ ಯೆಮೆನ್​ ಜಿಲ್ಲೆಯಲ್ಲಿ ಕಾಲ್ತುಳಿತ ಸಂಭವಿಸಿರುವುದಾಗಿ ಹುಥಿ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಇಬ್ಬರ ಆಸೆಗೂ ಕೊಳ್ಳಿ ಇಟ್ಟ ದಳ್ಳುರಿ: ಮೂರ್ತಿಗೂ ಇಲ್ಲ, ರಾಜ್​ಗೂ ಇಲ್ಲ ಕಾಂಗ್ರೆಸ್ ಟಿಕೆಟ್!

    ನುಗ್ಗಲು ಉಂಟಾಗಿ ಕಾಲ್ತುಳಿತ
    ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ರಂಜಾನ್​ ಪ್ರಯುಕ್ತ ಶಾಲೆಯ ಆವರಣ ಒಂದರ ಒಳಗೆ ನೆರವು ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಡತನ ಪೀಡಿತ ದೇಶದ ನೂರಾರು ಜನರು ನೆರವನ್ನು ಸ್ವೀಕರಿಸಲು ಒಂದೆಡೆ ಜಮಾಯಿಸಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

    ಈವೆಂಟ್​ ಆಯೋಜಕರ ಬಂಧನ
    ಹುಥಿ ಬಂಡುಕೋರರ ಅಲ್ ಮಸಿರಾ ಟಿವಿ ಚಾನೆಲ್‌ನಿಂದ ಪ್ರಸಾರವಾದ ವೀಡಿಯೊವು ಮೃತದೇಹಗಳನ್ನು ಒಟ್ಟಿಗೆ ಪ್ಯಾಕ್ ಮಾಡುತ್ತಿರುವುದನ್ನು ತೋರಿಸಿದೆ. ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಇದಲ್ಲದೆ, ನೆರವು ವಿತರಣೆಗೆ ಕಾರಣರಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹುಥಿ ಆಂತರಿಕ ಸಚಿವಾಲಯವು ಮಾಧ್ಯಮಗಳಿಗೆ ತಿಳಿಸಿದೆ. (ಏಜೆನ್ಸೀಸ್​)

    ಕಾಂಗ್ರೆಸ್​ ಐದನೇ, ಜೆಡಿಎಸ್​ ಮೂರನೇ ಪಟ್ಟಿ ಬೆನ್ನಿಗೇ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ!

    ಪುತ್ರನ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ನಟಿ ಶ್ರುತಿ ಕೆನ್ನೆ ಹಿಂಡಿದ ಮಾಜಿ ಸಿಎಂ!

    ಕಾಂಗ್ರೆಸ್​ನ ಅಂತಿಮ ಪಟ್ಟಿ ಪ್ರಕಟ: ಶಿಡ್ಲಘಟ್ಟ ಹಾಲಿ ಶಾಸಕ ಮುನಿಯಪ್ಪಗೆ ಟಿಕೆಟ್ ಮಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts