ಪುತ್ರನ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ನಟಿ ಶ್ರುತಿ ಕೆನ್ನೆ ಹಿಂಡಿದ ಮಾಜಿ ಸಿಎಂ!

ಶಿವಮೊಗ್ಗ: ಭಾಜಪದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಇಂದು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಟಿ ಶ್ರುತಿಯ ಕೆನ್ನೆ ಹಿಂಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ನಗರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಈ ಸನ್ನಿವೇಶ ಕಂಡುಬಂದಿದೆ. ಸಾವಿರಾರು ಜನರು ಜಮಾಯಿಸಿದ್ದ ಈ ಮೆರವಣಿಗೆಯಲ್ಲಿ ನಟಿ ಶ್ರುತಿ ಕೂಡ ಪಾಲ್ಗೊಂಡಿದ್ದು, ಪಕ್ಕದಲ್ಲಿದ್ದ ಬಿಎಸ್​ವೈ ಇದೇ ಸಂದರ್ಭದಲ್ಲಿ ಅವರ ಕೆನ್ನೆ ಹಿಂಡಿದ್ದು, ಈ ಫೋಟೋ ಎಲ್ಲೆಡೆ ಹರಿದಾಡಲಾರಂಭಿಸಿದೆ. … Continue reading ಪುತ್ರನ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ನಟಿ ಶ್ರುತಿ ಕೆನ್ನೆ ಹಿಂಡಿದ ಮಾಜಿ ಸಿಎಂ!