ಸಮತೋಲಿತ ಆರೋಗ್ಯಕ್ಕೆ ರಾಗಿ ಮಾಲ್ಟ್

HUN-FEB-22-4(RAGI MALT PROGRAMME)
Published on

ಹುಣಸೂರು: ನಗರದ ರಂಗನಾಥ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ವಿತರಿಸುವ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಚಾಲನೆ ನೀಡಿದರು.


ಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ಸಾಲಿನಲ್ಲಿ ಹಾಲಿನೊಂದಿಗೆ ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಅನ್ನಪೂರ್ಣೇಶ್ವರಿ ಸಂಸ್ಥೆಯವರು ಒದಗಿಸಿರುವ ಉಚಿತ ರಾಗಿಮಾಲ್ಟ್ ಪುಡಿಯನ್ನು ಬೆರೆಸಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ(ಅನಿಮಿಯಾ) ನಿಯಂತ್ರಿಸುವುದು, ಕಲಿಕಾ ಚಟುವಟಿಕೆಯಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವಂತೆ ಮಾಡಲು ನೀಡಲಾಗುತ್ತಿದೆ. ಈ ವರ್ಷವನ್ನು ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಿರಿಧಾನ್ಯಗಳ ಕುರಿತಾದ ಪರಿಚಯ, ಪ್ರಯೋಜನಗಳ ಕುರಿತು ಅರಿವು ಮೂಡಿಸುವುದು, ಮಕ್ಕಳಲ್ಲಿ ಸಮತೋಲಿತ ಆರೋಗ್ಯ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುರಿ ಹೊಂದಿದೆ. ತಾಲೂಕಿನ 23,953 ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ರಾಗಿಮಾಲ್ಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.


ನಗರಸಭಾ ಸದಸ್ಯ ದೇವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ, ಶಿಕ್ಷಕರಾದ ಗೋವಿಂದೇಗೌಡ, ನರಸಿಂಹ, ಮುಖ್ಯಶಿಕ್ಷಕಿ ಲಕ್ಷ್ಮೀ ನರಸಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net