ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರಿಗಿದೆ ಪಾತ್ರ :ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಆಶೀರ್ವಚನ

New Project (11)
Published on

ಬದಿಯಡ್ಕ: ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರದ್ದೇ ಮುಖ್ಯ ಪಾತ್ರ. ಉತ್ತಮ ನಡವಳಿಕೆಯೊಂದಿಗಿನ ಆಧುನಿಕ ವಿದ್ಯಾಭ್ಯಾಸದ ಜ್ಞಾನವನ್ನೂ ಧಾರೆಯೆರೆಯುತ್ತಾ ಅಧ್ಯಾಪನ ವೃತ್ತಿಯನ್ನು ಸಾರ್ಥಕಗೊಳಿಸಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದರು.

ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಭೇಟಿ ನೀಡಿ ಶಾಲೆಯಲ್ಲಿ ನಿರ್ಮಾಣವಾಗಲಿರುವ ಭೋಜನ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆಗೈದು ಆಶೀರ್ವಚನ ನೀಡಿದರು.

ಆಡಳಿತ ಸಮಿತಿಯ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಗುರುವಂದನೆಗೈದು ಫಲಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು. ರು. ಮಠದ ಮಾತೃತ್ವಂ ವಿಭಾಗದ ಮುಖ್ಯಸ್ಥೆ ಈಶ್ವರಿ ಬೇರ್ಕಡವು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಪಜಿಲ, ಡಾ. ವೈ.ವಿ.ಕೃಷ್ಣಮೂರ್ತಿ, ಈಶ್ವರ ಭಟ್ ಹಳೆಮನೆ, ಮಧುಸೂದನ ತಿಮ್ಮಕಜೆ, ಕೆ.ಎನ್.ಭಟ್, ಜೋತಿಷಿ ನವನೀತಪ್ರಿಯ ಕೈಪ್ಪಂಗಳ, ರಾಜಗೋಪಾಲ ಚುಳ್ಳಿಕ್ಕಾನ, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಶ್ಯಾಮ ಭಟ್ ಬೇರ್ಕಡವು, ಪಾಲಕರು, ಮಠದ ಶಿಷ್ಯರು ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net