

ಸುಳ್ಯ: ಬೆಳ್ಳಾರೆ ದರ್ಖಾಸ್ತು ರಸ್ತೆ ಅಗಲೀಕರಣ ಕಾಮಗಾರಿ ಕೆಲಸ ಭರದಿಂದ ಸಾಗುತ್ತಿದ್ದು, ರಸ್ತೆ ಅಗೆಯುವ ಕಾರಣದಿಂದ ರಸ್ತೆ ಇಡೀ ಧೂಳುಮಯವಾಗಿದೆ. ತಿಂಗಳ ಹಿಂದೆ ರಸ್ತೆ ಅಗಲೀಕರಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಬೆಳ್ಳಾರೆ ಜಂಕ್ಷನ್‌ನಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಅಳವಡಿಕೆ ಕೆಲಸ ಕೂಡಾ ಪ್ರಾರಂಭವಾಗಿದೆ.
ಪೈಪ್‌ಲೈನ್ ಕೆಲಸ ಮುಗಿಯದಿರುವುದರಿಂದ ರಸ್ತೆ ಅಗಲೀಕರಣ, ಡಾಮರೀಕರಣಕ್ಕೆ ತೊಡಕಾಗಿದೆ. ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಪೈಪ್‌ಲೈನ್ ಅಳವಡಿಸಲಾಗಿದ್ದು, ರಸ್ತೆ ಬದಿ ಹೊಂಡಗಳು ನಿರ್ಮಾಣವಾಗಿವೆ. ಬೆಳ್ಳಾರೆಯಿಂದ ದರ್ಖಾಸುವರೆಗೆ ಪೈಪ್‌ಲೈನ್ ಕಾಮಗಾರಿ ಆದಷ್ಟು ಬೇಗ ಮುಗಿಸುವಂತೆ ಹಾಗೂ ರಸ್ತೆ ಬದಿ ಮರಗಳ ತೆರವಿಗೆ ಸಂಬಂಧಪಟ್ಟ ಇಲಾಖೆಗೆ ಸೂಚಿರುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.