ರಾಘವೇಂದ್ರ ಶ್ರೀಗಳ ಆರಾಧನಾ ಮಹೋತ್ಸವ

4 NRD-1-Raghavendra shree
Published on

ನರಗುಂದ: ತಾಲೂಕಿನ ಕೊಣ್ಣೂರ ನಂಜನಗೂಡು ಸಂಸ್ಥಾನಮಠದ ಶ್ರೀಗುರು ರಾಘವೇಂದ್ರ ಮಹಾಸ್ವಾಮಿಗಳ ಮಠದಲ್ಲಿ ಶ್ರೀಗುರು ರಾಘವೇಂದ್ರ ಸಾರ್ವಭೌಮರ 352ನೇ ಆರಾಧನೆ ಮಹೋತ್ಸವವು ಭಾನುವಾರ ವಿಜೃಂಭಣೆಯಿಂದ ನಡೆಯಿತು.


ಶ್ರೀ ಗುರು ರಾಯರ ಪೂರ್ವರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಕಾರ್ಯಕ್ರಮಗಳಲ್ಲಿ ರಾಯರ ಪಾದಪೂಜೆ, ಫಲ ಪಂಚಾಮೃತ, ಕನಕಾಭಿಷೇಕ, ವಿಶೇಷ ಹೂವಿನ ಅಲಂಕಾರ, ಹಸ್ತೋದಕ, ಸ್ವಸ್ತಿವಚನ, ಮಹಾ ರಥೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಕೊಣ್ಣೂರು, ನರಗುಂದ, ಸುರೇಬಾನ, ರಾಮದುರ್ಗ, ಕುಳಗೇರಿ, ಶಿರೋಳ, ಕೆರೂರು, ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧೆಡೆಯ ಸಾವಿರಾರು ಭಕ್ತರು ಗುರುರಾಯರ ಆರಾಧನೆ ಮಹೋತ್ಸವಕ್ಕೆ ಸಾಕ್ಷಿಯಾದರು.


ದೇವಸ್ಥಾನದ ವ್ಯವಸ್ಥಾಪಕ ಪ್ರಾಣೇಶ ಆಚಾರ್ಯ ಮಾತನಾಡಿ, ಕೊಣ್ಣೂರಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ಅವರಿಂದ 1973ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ರಾಯರ ಮಠವು ನಿರ್ವಣಗೊಂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net