ಬೇತು ಗ್ರಾಮದಲ್ಲಿ ರೇಬಿಸ್ ಲಸಿಕಾ ಶಿಬಿರ

ಬೇತು ಗ್ರಾಮದಲ್ಲಿ ರೇಬಿಸ್ ಲಸಿಕಾ ಶಿಬಿರ
Published on

ನಾಪೋಕ್ಲು: ರೇಬಿಸ್ ರೋಗ ಹರಡುವಿಕೆಯನ್ನು ತಡೆಗಟ್ಟಲು ಲಸಿಕೆ ಹಾಕಲಾಗುತ್ತಿದ್ದು, ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಶಿಲ್ಪಶ್ರೀ ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತಿ, ಪಶುಪಾಲನ ಇಲಾಖೆ ಮಡಿಕೇರಿ ಹಾಗೂ ಪಶು ಆಸ್ಪತ್ರೆಗಳ ಆಶ್ರಯದಲ್ಲಿ ಸಮೀಪದ ಬೇತು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ರೇಬಿಸ್ ಲಸಿಕೆ ಹಾಗೂ ಪಶು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಬೇತು ಗ್ರಾಮದ ಊರ್ ಮಂದ್‌ನಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ಗ್ರಾಮ ಪಂಚಾಯಿತಿ ಸದಸ್ಯ ಸಾಬ ತಿಮ್ಮಯ್ಯ ಉದ್ಘಾಟಿಸಿದರು. ಶಿಬಿರದಲ್ಲಿ ಬಂಜೆ ರಾಸುಗಳ ತಪಾಸಣೆ, ಹೋರಿ ಮತ್ತು ರಾಸುಗಳ ಕಸಿ, ಜಂತು ನಾಶಕ ಔಷಧ, ಲವಣ ಮಿಶ್ರಣ, ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಿ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಲಾಯಿತು.

ಮಡಿಕೇರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ನಾಪೋಕ್ಲು ಪಶು ಆಸ್ಪತ್ರೆಯ ಜಾನುವಾರು ಅಧಿಕಾರಿ ನವೀನ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಸುನೀಲ್, ಪಶು ಸಖಿ ನಿಷಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net