

ಬೆಂಗಳೂರು: ರಾಜಧಾನಿಯಲ್ಲಿ ರೇಬಿಸ್ ಸೋಂಕು,ನಾಯಿ ಕಡಿತ ಪ್ರಕರಣ ತಗ್ಗಿಸಲು ಮುಂದಾಗಿರುವ ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ 13,390 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಹಾಗೂ 43,656 ನಾಯಿಗಳಿಗೆ ರೇಬೀಸ್ ರೋಗ ನಿರೋಧಕ ಲಸಿಕೆ (ಎಆರ್ವಿ) ನೀಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ,ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಅನುಸಾರ ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳು, ನಾಯಿಗಳಿಗೆ ಸಂತಾನಹರಣ ಶಸಚಿಕಿತ್ಸೆ ಕಾರ್ಯದಲ್ಲಿ ತೊಡಗಿದ್ದಾರೆ. ಬೀದಿನಾಯಿಗಳ ಕಡಿತದ ವೇಳೆ ತೆಗೆದುಕೊಳ್ಳಬೇಕಾದ ಕ್ರಮ ಬಗ್ಗೆಯೂ ಎಲ್ಲ ವಲಯಗಳಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಾಯಿ ಕಡಿತ, ರೇಬೀಸ್ ಶಂಕಿತ ಕುರಿತು 6364893322 ಅಥವಾ ಬಿಬಿಎಂಪಿ ಸಹಾಯವಾಣಿ 1533ಕ್ಕೆ ಕರೆ ಮಾಡಬಹುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ನಾಯಿ ಇಡುವ 424 ಕೆನಲ್ಸ್, 10ರಿಂದ 15 ನಾಯಿ ಇಡಬಹುದಾದಂತಹ 8 ಕೆನಲ್ಸ್, ರೇಬೀಸ್ ನಾಯಿಗೆ ಚಿಕಿತ್ಸೆ ನೀಡಲು 4 ಐಸೋಲೇಷನ್ ಕೆನಲ್ಸ್ ಸಾಮರ್ಥ್ಯ ಹೆಚ್ಚಿಸಲಾಗಿದೆ. ಶಸಚಿಕಿತ್ಸಾ ಕೇಂದ್ರಗಳ ದುರಸ್ತಿ, ವಿಸ್ತರಣಾ ಕಾಮಗಾರಿಗಳಿಗೆ 1.77 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ಮತ್ತು ಸಾಕುನಾಯಿ ಸೇರಿ ಅಂದಾಜು 3,09,976 ನಾಯಿಗಳಿವೆ.
ಪ್ರತಿ ವರ್ಷ ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡುತ್ತಿದ್ದರೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಚುಚ್ಚುಮದ್ದು ನೀಡದ ನಾಯಿಗಳು ಬಂದು ರೇಬಿಸ್ ಹರಡಲು ಕಾರಣವಾಗುತ್ತಿದೆ. ಇದರಿಂದ ರೇಬಿಸ್ ಸೋಂಕು ಕಂಡುಬರುವ ನಾಯಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. ಜನವಸತಿ ಪ್ರದೇಶದಲ್ಲಿರುವ ಬೀದಿ ನಾಯಿಗಳಿಗೆ ಜನರು ಆಹಾರ ಹಾಕುತ್ತಾರೆ. ಆದರೆ, ಬೀದಿ ವ್ಯಾಪಾರಿ, ಹೋಟೆಲ್ಗಳು, ಕಲ್ಯಾಣ ಮಂಟಪ, ದೇವಸ್ಥಾನಗಳ ಬಳಿ ಸುರಿಯುತ್ತಿದ್ದ ತ್ಯಾಜ್ಯದಲ್ಲಿ ಕೆಲ ನಾಯಿಗಳು ಆಹಾರ ಹುಡುಕಿ ತಿನ್ನುತ್ತೇವೆ. ಪ್ರಾಣಿ ಪ್ರಿಯರು, ವಾಯು ವಿಹಾರಿಗಳು, ವ್ಯಾಪಾರಿಗಳು ಮತ್ತು ಕಾರ್ಖಾನೆ ಉದ್ಯೋಗಿಗಳು ಆಹಾರ ಕೊಡುತ್ತಾರೆ. ಮಾಂಸದ ಅಂಗಡಿಗಳ ಮುಂದೆ ಆಹಾರಕ್ಕಾಗಿ ಕಾಯುತ್ತಿದ್ದ, ಕಸದ ರಾಶಿಗಳ ಬಳಿ ಆಹಾರ ಹುಡುಕುತ್ತಿದ್ದ ನಾಯಿಗಳು ರಸ್ತೆಯಲ್ಲಿ ಸಂಚಾರ ಮಾಡುವವರ ಮೇಲೆ ಹೆಚ್ಚಾಗಿ ದಾಳಿ ಮಾಡುತ್ತಿವೆ. ಮಾಂಸದಂಗಡಿಗಳು ಬಿಸಾಡುವ ಮಾಂಸದ ತ್ಯಾಜ್ಯ ತಿನ್ನುತ್ತಿದ್ದ ನಾಯಿಗಳು ಆಕ್ರಮಣಕಾರಿಯಾಗಿವೆ. ಹೀಗಾಗಿ, ಪ್ರತಿನಿತ್ಯ ಮಧ್ಯರಾತ್ರಿವರೆಗೂ ಕೆಲಸ ಮಾಡುವವರ ಮೇಲೆ, ಬೀದಿಗಳಲ್ಲಿ ಮಲಗುವ ನಿರ್ಗತಿಕರ ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಹಾಗೂ ಮುಂಜಾನೆ ವೇಳೆ ಪತ್ರಿಕೆ ಹಾಕುವ ಹುಡುಕರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ.
ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿದ್ದರೂ ಹೆಚ್ಚಳ: ಪ್ರತಿವರ್ಷ ಸಾವಿರಾರು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ 3 ರಿಂದ 5 ಕೋಟಿ ರೂ. ಪಾಲಿಕೆ ವೆಚ್ಚ ಮಾಡುತ್ತಿದೆ. ಆದರೆ, ಯಾವುದೇ ವಾರ್ಡ್ಗಳಲ್ಲಿ, ಬೀದಿಗಳಲ್ಲಿ ನಾಯಿಗಳ ಸಂತಾನ ಕಡಿಮೆಯಾಗಿಲ್ಲ. ರಾತ್ರಿ ವೇಳೆ ಸಂಚರಿಸುವವರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸುತ್ತಿವೆ. ಇನ್ನೂ ಮಾಂಸದಂಗಡಿಗಳು, ಕಸ ಬಿಸಾಡುವ ಬ್ಲಾಕ್ ಸ್ಪಾಟ್ಗಳ ಬಳಿ ರಾತ್ರಿ ಸಂಚಾರದ ವೇಳೆ ನಾಯಿಗಳ ದಾಳಿ ತಪ್ಪಿಸಿಕೊಳ್ಳುವುದೇ ಸವಾಲಾಗಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಐಟಿ ಬಿಟಿ ಉದ್ಯೋಗಿಗಳು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವವರು ಬೀದಿ ನಾಯಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾತ್ರಿ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ನಾಯಿಗಳು ಬೊಗಳಿ ದಾಳಿ ಮಾಡುತ್ತಿದ್ದಾಗ ಆತಂಕ ಪಡದೆ ನಿಧಾನವಾಗಿ ಚಲಿಸಬೇಕು. ಒಂದು ವೇಳೆ ನಾಯಿಗೆ ಹೆದರಿಗೆ ವೇಗವಾಗಿ ಚಲಿಸುವ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಬೀದಿ ನಾಯಿ ಕಚ್ಚರೆ ಯಾವುದೇ ಕಾರಣಕ್ಕೂ ರ್ನಿಲಕ್ಷ$್ಯವಹಿಸದೆ ತಕ್ಷಣೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.
ವಲಯವಾರು ನಾಯಿಗಳ ಚಿಕಿತ್ಸೆ ವಿವರ:
ವಲಯ ಎಬಿಸಿ ಎಆರ್ವಿ
ಪೂರ್ವ 2,918 3,935
ಪಶ್ಚಿಮ 2,910 5,148
ದಕ್ಷಿಣ 1,909 4,663
ಆರ್.ಆರ್.ನಗರ 1,428 3,652
ದಾಸರಹಳ್ಳಿ 1,317 5,431
ಯಲಹಂಕ 1,231 6,087
ಬೊಮ್ಮನಹಳ್ಳಿ 3,095 4,974
ಮಹದೇವಪುರ 2,093 9,766