

ಬ್ರಹ್ಮಾವರ: ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲೆ, ಪಶು ಆಸ್ಪತ್ರೆ ಬ್ರಹ್ಮಾವರ, ವಾರಂಬಳ್ಳಿ ಗ್ರಾಪಂ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಲಯನ್ಸ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ, ರೋಟರಿ ರೋಯಲ್ ಬ್ರಹ್ಮಾವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಅರಿವು ಮತ್ತು ಉಚಿತ ಹುಚ್ಚುನಾಯಿ ರೋಗ ರೇಬಿಸ್ ನಿರೋಧಕ ಲಸಿಕಾ ಶಿಬಿರ ನಡೆಯಿತು. ಉಡುಪಿ ಜಿಲ್ಲಾ ಪಶುಪಾಲನಾ ನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ ಆರ್., ರೋಟರಿ ರೋಯಲ್ ಚಂದ್ರಶೇಖರ ನಾಯರಿ, ಸಮುದಾಯ ಆರೋಗ್ಯ ಕೇಂದ್ರ ಡಾ.ಏರಿಕ್, ನಿವೃತ್ತ ಪಶು ವೈದ್ಯ ಡಾ.ಮಹೇಶ್ ಶೆಟ್ಟಿ, ಡಾ.ಸರ್ವೋತ್ತಮ ಉಡುಪ, ಲಯನ್ ದಿವಾಕರ ಸನಿಲ್ ಉಪಸ್ಥಿತರಿದ್ದರು. ಬ್ರಹ್ಮಾವರ ಪಶು ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ವಂದಿಸಿದರು.