

ಕೋಟ: ಶಿಕ್ಷಕರನ್ನು ನಿವೃತ್ತಿ ನಂತರ ದಿನಗಳಲ್ಲಿ ಗುರುತಿಸುವ ಕಾಯಕ ಶೈಕ್ಷಣಿಕ ಬದುಕಿನ ಸಾರ್ಥಕ ಕ್ಷಣಕ್ಕೆ ಸಾಕ್ಷಿ ಎಂದು ಕೋಟ ವಿವೇಕ ವಿದ್ಯಾಸಂಸ್ಥೆ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು.
ಡಾ.ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ, ಸಾಲಿಗ್ರಾಮ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಗೀತಾನಂದ ಫೌಂಡೇಶನ್, ಕೋಟ-ಮಣೂರು, ಕೋಟ ವಿದ್ಯಾ ಸಂಘ ಕೋಟ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸಾಹಿತ್ಯಕ ಸಮಾವೇಶ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಕೋಟ ಶಿವರಾಮ ಕಾರಂತ ಮಕ್ಕಳ ವೇದಿಕೆ ಅಧ್ಯಕ್ಷ ಸಿ.ಉಪೇಂದ್ರ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್‌ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೇ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ನಾಗೇಶ್ ಮಯ್ಯ ನಿರೂಪಿಸಿದರು.
ನಿವೃತ್ತ ಶಿಕ್ಷಕರಾದ ಮಂಜುನಾಥ್ ಉಪಾಧ್ಯಾಯ, ಜಗದೀಶ್ ಹೊಳ್ಳ, ರಮೇಶ್ ನಕ್ಷತ್ರಿ, ಪ್ರಭಾಕರ ಕಾಮತ್, ರಾಮಕೃಷ್ಣ ಉಪಾಧ್ಯಾಯ, ಆನಂದರಾಮ ವಾಕುಡ, ರಾಮದೇವ ಹಂದೆ, ಮಹಾಬಲೇಶ್ವರ ಉರಾಳ, ರಂಗಯ್ಯ ಅಡಿಗ, ರಂಗಪ್ಪಯ್ಯ ಹೊಳ್ಳ, ಸೂರ್ಯನಾರಾಯಣ ಹೇರ್ಳೆ, ರಾಘವೇಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಿ.ನಾಗೇಶ್ ಅವರನ್ನು ಗೌರವಿಸಲಾಯಿತು.