ಮಕ್ಕಳಲ್ಲಿ ರೇಬೀಸ್​ ಜಾಗೃತಿ ಮೂಡಿಸುವುದು ಅವಶ್ಯ

12MUDALGI1
Published on

ಮೂಡಲಗಿ: ರೇಬೀಸ್​ ಮಾರಣಾಂತಿಕ ರೋಗವಾಗಿದ್ದು, ಶ್ವಾನಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಅಪಾಯ ತಪ್ಪಿಸಬೇಕು ಎಂದು ತಾಲೂಕು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಹೇಳಿದರು.

ಪಟ್ಟಣದ ಪಶುಆಸ್ಪತ್ರೆ ಆವರಣದಲ್ಲಿ ಮೂಡಲಗಿ ಲಯನ್ಸ್​ಕ್ಲಬ್​ ಪರಿವಾರ ಹಾಗೂ ಪಶುಪಾಲನೆ ಮತ್ತು ಪಶು ವೆದ್ಯಕಿಯ ಸೇವಾ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ವಾನಗಳಿಗೆ ರೇಬೀಸ್​ ಲಸಿಕೆ ಹಾಕುವ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾಕು ಪ್ರಾಣಿಗಳ ಮಾಲೀಕರು ಲಸಿಕೆ ಹಾಕಿಸಬೇಕು. ಒಂದು ತಿಂಗಳ ನಂತರ ಬೂಸ್ಟರ್​ಡೋಸ್​ ಹಾಕಿಸಬೇಕು. ಶಾಲಾ ಮಕ್ಕಳಲ್ಲಿಯೂ ರೇಬೀಸ್​ ಜಾಗೃತಿ

ಮೂಡಿಸಲಾಗುತ್ತಿದೆ ಎಂದರು.

ಪಾಲಿಕ್ಲಿನಿಕ್​ ಉಪನಿರ್ದೇಶಕ ಡಾ.ಎಂ.ಬಿ.ವಿಭೂತಿ ಮಾತನಾಡಿ, ಮೂಡಲಗಿ ಆಸ್ಪತ್ರೆ ಅಥವಾ ತಾಲೂಕಿನ ಆಯಾ ಗ್ರಾಮಗಳ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ರೇಬೀಸ್​ ಲಸಿಕೆ ಹಾಕಿಸಬಹುದಾಗಿದೆ ಎಂದರು.

ಲಯನ್ಸ್​ ಕ್ಲಬ್​ ಅಧ್ಯ ವಿಶಾಲ ಶೀಲವಂತ, ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿ ಡಾ.ಪ್ರಶಾಂತ ಬಾಬಣ್ಣವರ, ವೆಂಕಟೇಶ ಸೋನವಾಲಕರ, ಈರಣ್ಣ ಕೊಣ್ಣೂರ, ಬಾಲಶೇಖರ ಬಂದಿ, ಸಂಜಯ ಮೋಕಾಶಿ, ಪ್ರಮೋದ ಪಾಟೀಲ, ಸಂಗಮೇಶ ಕೌಜಲಗಿ, ಡಾ.ಮಹಾದೇವ ಕೌಜಲಗಿ, ಡಾ.ಪಿ.ಕೆ.ಕೋಸ್ಟಿ, ಡಾ.ಸೀಮಾ ತುಂಗಳ, ಡಾ.ಎಸ್​.ಎಂ.ಕುಲಗೋಡ, ಸುರೇಶ ಆದಪ್ಪಗೋಳ, ಮಹಾಂತೇಶ ಹೊಸೂರ, ಶಂಕರ ಶಾಬಣ್ಣವರ, ಸರಸ್ವತಿ ಮುನ್ಯಾಳ, ಸತೀಶ ಉಮಾರಾಣಿ, ಎಲ್​.ಎಸ್​. ಶಾಬಣ್ಣವರ, ಯಮನಪ್ಪ ಭರಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net