ಎನ್‌ಟಿಪಿಸಿಯ ಕಲ್ಲಿದ್ದಲು ಘಟಕದಲ್ಲಿ ಅಗ್ನಿ ಅವಘಡ: ಕಲ್ಲಿದ್ದಲು ಸಾಗಣೆ ಯಂತ್ರದಲ್ಲಿ ಕಾಣಿಸಿಕೊಂಡ ಬೆಂಕಿ

Fire Accident
Published on

ವಿಜಯಪುರ: ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.

ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕಲ್ಲಿದ್ದಲು ಸಾಗಾಣಿಕೆಯ ಯಂತ್ರ ಚಾಲನೆಯಲ್ಲಿ ಇರುವಾಗ ಬೇರಿಂಗ್ ತಿರುಗುತ್ತ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಟ್ ಗೆ ಬೆಂಕಿ ತಾಕಿದ್ದರಿಂದ ಬೆಂಕಿ ಜ್ವಾಲೆ ಹರಡಿತು. ಕೂಡಲೇ ಸ್ಥಾವರ ವ್ಯಾಪ್ತಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಸಂಭವನೀಯ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net