ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ.ಎಂ. ಸಜ್ಜನ್ ವಿಧಿವಶ

MM Sajjan
Published on

ವಿಜಯಪುರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ ಎಂ ಸಜ್ಜನ್ (95) ಮಂಗಳವಾರ (ಫೆ.1) ನಸುಕಿನ ಜಾವ ವಿಧಿವಶರಾದರು.

ಸಜ್ಜನ್​ ಅವರು ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ 1972 ರಿಂದ 78 ರವರೆಗೆ ಸೇವೆ ಸಲ್ಲಿಸಿದ್ದರು. ಇಂದು ಸಾಯಂಕಾಲ 4 ಗಂಟೆಗೆ ಮುದ್ದೇಬಿಹಾಳದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಮಾಜಿ ಶಾಸಕ ಎಂ ಎಂ ಸಜ್ಜನ ನಿಧನಕ್ಕೆ ವಿವಿಧ ಮಠಾದೀಶರ, ಗಣ್ಯರ ಹಾಗೂ ರಾಜಕಾರಣಿಗಳ ಸಂತಾಪ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net