ಕಾಂಗ್ರೆಸ್​ನಿಂದ ಎಡವಟ್ಟು: ಬಿ ಫಾರಂ ಕೊಟ್ಟು, ಅಭ್ಯರ್ಥಿ ವಿರುದ್ಧವೇ ಪ್ರಚಾರಕ್ಕೆ ಮುಂದಾದ ಕಾಂಗ್ರೆಸ್​ ನಾಯಕರು

Girija
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಿರಿಜಾ ಸೋಮಶೇಖರ್ ಬಣ್ಣದ ಮನೆ
Published on

ವಿಜಯನಗರ: ಹೊಸಪೇಟೆಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಹಾ ಎಡವಟ್ಟೊಂದನ್ನು ಮಾಡಿಕೊಂಡಿದೆ. ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿರುವ ಕಾಂಗ್ರೆಸ್​, ಇದೀಗ ನಾವು ತಪ್ಪು ಮಾಡಿದ್ದೇವೆ, ದಯವಿಟ್ಟು ಅವರಿಗೆ ಮತ ನೀಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದೆ.

ಹೊಸಪೇಟೆಯ 16ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮುಮ್ತಾಜ್​ಗೆ ಕಾಂಗ್ರೆಸ್ ಬಿ ಫಾರಂ ನೀಡಿದೆ. ಇದು ಗೊತ್ತಾಗುತ್ತಿದ್ದಂತೆ ನಾವು ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ಕೊಟ್ಟು ತಪ್ಪು ಮಾಡಿದ್ದೇವೆ. ಅವರಿಗೆ ಮತ ನೀಡಬೇಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಿರಿಜಾ ಸೋಮಶೇಖರ್ ಬಣ್ಣದ ಮನೆ ಅವರಿಗೆ ಮತ ನೀಡಿ ಅಂತ ಕಾಂಗ್ರೆಸ್​ ನಾಯಕರು ಮನವಿ ಮಾಡುತ್ತಿದ್ದಾರೆ.

ಕೆಪಿಸಿಸಿಯಿಂದ ನಮಗೆ ಆದೇಶ ಬಂದಿದೆ. ಕಾಂಗ್ರೆಸ್ ಪಕ್ಷದ ಬಿ ಫಾರಂ ನೀಡಿದ ಅಭ್ಯರ್ಥಿ ಪರ ಮತಯಾಚನೆ ಮಾಡೋದಿಲ್ಲ. ಏಕೆಂದರೆ, ಅವರು ಬಿಜೆಪಿ ಅಭ್ಯರ್ಥಿ. ಗಿರಿಜಾ ಸೋಮಶೇಖರ್ ಬೆಂಬಲಿಸುವ ಮೂಲಕ ಕಾಂಗ್ರೆಸ್ ಮತಗಳು ಅವರಿಗೆ ಹಾಕಿಸೋ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್​ ನಾಯಕರು ಹೇಳಿಕೊಂಡಿದ್ದಾರೆ.

ತಾವು ಮಾಡಿದ ಎಡವಟ್ಟಿನಿಂದಾಗಿ ಕಾಂಗ್ರೆಸ್​ ಇದೀಗ ಬಿ ಫಾರಂ ಕೊಟ್ಟ ಅಭ್ಯರ್ಥಿ ವಿರುದ್ಧವೇ ಪ್ರಚಾರ ಮಾಡಲು ಮುಂದಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net