ಉತ್ತರ ಕನ್ನಡದ ದಾಂಡೇಲಿಯಲ್ಲಿ ಸೈಕಲ್​ ಅಪಘಾತದಲ್ಲಿ ಯುವ ವೈದ್ಯೆ ದುರಂತ ಸಾವು

Young Doctor
Published on

ಉತ್ತರ ಕನ್ನಡ: ಸೈಕಲ್​ ಅಪಘಾತದಲ್ಲಿ ಯುವ ವೈದ್ಯೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ದಾಂಡೇಲಿ ಸಮೀಪ ಬೀರಂಪಾಲಿ ಬಳಿ ಗುರುವಾರ (ಮಾ.3) ನಡೆದಿದೆ.

ಮೃತ ಯುವ ವೈದ್ಯೆಯನ್ನು ಛತ್ತೀಸಗಢ ಮೂಲದ ದೇವಿಕಾ ಸಂಜಯ ವಾಸವಾಣಿ (25) ಎಂದು ಗುರುತಿಸಲಾಗಿದೆ. ದೇವಿಕಾ ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದರು. ಸೈಕ್ಲಿಂಗ್ ಮಾಡುವ ವೇಳೆ ಸ್ಕಿಡ್ ಆಗಿ ಸೈಕಲ್​ ಮರಕ್ಕೆ ಡಿಕ್ಕಿ ಹೊಡೆದಿದೆ. ತೀವ್ರ ಪೆಟ್ಟಾಗಿದ್ದರಿಂದ ವೈದ್ಯೆ ಸಾವಿಗೀಡಾಗಿದ್ದಾಳೆ.

ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೇವಿಕಾ ಮೃತದೇಹವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net