ಯೂಕ್ರೇನ್​​ ಕಾಲೇಜು ಅಂಡರ್​ಗ್ರೌಂಡ್​ನಲ್ಲಿರುವ ಮಗನನ್ನು ವಾಪಸ್ ಭಾರತಕ್ಕೆ ಕರೆ ತರಲು ಮನವಿ ಮಾಡಿದ ತಂದೆ

CHN father
Published on

ಚಾಮರಾಜನಗರ: ರಷ್ಯಾ-ಯೂಕ್ರೇನ್ ನಡುವಿನ ಯುದ್ಧ ಹಿನ್ನೆಲೆಯಲ್ಲಿ ರಕ್ಷಣೆ ದೃಷ್ಟಿಯಿಂದ ಯೂಕ್ರೇನ್ ಕಾಲೇಜು ಅಂಡರ್​ಗ್ರೌಂಡ್​ನಲ್ಲಿರುವ ಮಗನನ್ನು ವಾಪಸ್ ಭಾರತಕ್ಕೆ ಕರೆ ತನ್ನಿ ಎಂದು ನಾಗಭೂಷಣ್ ಮನವಿ ಮಾಡಿದ್ದಾರೆ.

ಹನೂರು ತಾಲೂಕಿನ ವಡ್ಡರಪಾಳ್ಯ ಗ್ರಾಮದ ನಿವಾಸಿ ನಾಗಭೂಷಣ್ ಮಗ ಸಿದ್ದೇಶ್ ಯೂಕ್ರೇನ್​ ರಾಜಧಾನಿ ಕಿಯೆವ್​ನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಮಗನೊಂದಿಗೆ ಬೆಳಗ್ಗೆ ಫೋನ್​ನಲ್ಲಿ ಮಾತನಾಡಿದ್ದೇನೆ. ಚೆನ್ನಾಗಿದ್ದಾನಂತೆ ಏನೂ ತೊಂದರೆ ಇಲ್ಲ. ಅವನೊಂದಿಗೆ 350 ಜನ ಅದೇ ಕಾಲೇಜು ಹಾಸ್ಟೆಲ್ ಅಂಡರ್​ಗ್ರೌಂಡ್ ಬಂಕರ್​ನಲ್ಲಿ ಇದ್ದಾರಂತೆ. ಆದ್ದರಿಂದ ಗಾಬರಿ ಪಡಬೇಡಿ ಎಂದು ಹೇಳಿದ್ದಾನೆ.

ಸರ್ಕಾರ ಏನಾದರೂ ಮಾಡಿ ನನ್ನ ಮಗ ಮತ್ತು ಕರ್ನಾಟಕದವರನ್ನು ವಾಪಸ್ ಕರೆಸಬೇಕೆಂದು ನಾಗಭೂಷಣ್​ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net