

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳು ಗುಡ್ಡೆ ಸಮೀಪದ ಭಟ್ರಾಡಿಯ ಹೊಳೆಯಲ್ಲಿ ಈಜಲು ಹೋದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಸುದರ್ಶನ್ 16, ಸೋನಿತ್ 17 ಹಾಗೂ ಕಿರಣ್ 16 ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲೆ ಎತ್ತಲಾಗಿದೆ.
ಸ್ಥಳಕ್ಕೆ ಹೆಬ್ರಿ ತಹಸೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಹಿತೇಶ್, ಪಿಎಸ್ಐ ಮಹೇಶ್, ಮುಖಂಡರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ್ ಪೂಜಾರಿ ಪರಿಶೀಲನೆ ನಡೆಸಿದರು.
ಒಟ್ಟು 13 ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹಾಕಿ ಈಜಲು ತೆರಳಿದ್ದರು.