VIDEO | ಸಿಬ್ಬಂದಿ ಜತೆ ಚೆಲ್ಲಾಟ: ವೈದ್ಯಾಧಿಕಾರಿಯ ಕಾಮಪುರಾಣದ ಫೋಟೋಗಳು ವೈರಲ್​!

Dr Ratnakar
Published on

ಮಂಗಳೂರು: ಆರೋಗ್ಯ ಇಲಾಖೆ ಆಧಿಕಾರಿಯ ಕಾಮಪುರಾಣವೊಂದು ಬಯಲಾಗಿದೆ. ಕಚೇರಿಯ ಸಿಬ್ಬಂದಿ ಜತೆ ವೈದ್ಯಾಧಿಕಾರಿ ತುಂಬಾ ಸಲುಗೆಯಿಂದಿರುವ ಫೋಟೋ ಮತ್ತು ವಿಡಿಯೋಗಳು ಬಹಿರಂಗವಾಗಿದ್ದು, ಕಾಮುಕ ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿಬಂದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ. 

ಕಚೇರಿಯ 9 ಮಹಿಳಾ ಸಿಬ್ಬಂದಿಗಳ ಜತೆ ವೈದ್ಯಾಧಿಕಾರಿ ಚೆಲ್ಲಾಟವಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಅದು ಹಾಡುಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಸಿಬ್ಬಂದಿಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕಳ ನೀಡುತ್ತಾರಂತೆ.

ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿರೋ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿಗಳ ಜತೆ ನಿತ್ಯ ಚೆಲ್ಲಾಟ ನಡೆಯುತ್ತಿತ್ತು. ಒಂದು ವೇಳೆ ಸಹಕಾರ ನೀಡದಿದ್ದರೆ ಸಿಬ್ಬಂದಿಗೆ ಟಾರ್ಚರ್ ಮಾಡುತ್ತಾರೆಂಬ ಆರೋಪವಿದೆ. ಅಲ್ಲದೆ, ಮಹಿಳಾ ಸಿಬ್ಬಂದಿಯನ್ನು ಟ್ರಿಪ್​ಗೆ ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ. 

ಈ ವಿಚಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ಬಂದ ಬಳಿಕ ಆರೋಪಿ ವೈದ್ಯ ರತ್ನಾಕರ್​ ವಿರುದ್ಧ ತನಿಖೆ ನಡೆಸಿ, ಇದೀಗ ಕೆಲಸದಿಂದ ವೈದ್ಯನನ್ನು ಅಮಾನತು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net