ಹಿಜಾಬ್​ ಹಾಕಿಕೊಂಡು ತರಗತಿಯಲ್ಲಿ ಕುಳಿತಿರುವ ಫೋಟೋ ವೈರಲ್​: ವಿದ್ಯಾರ್ಥಿನಿ ಕೊಟ್ಟ ಸ್ಪಷ್ಟನೆ ಹೀಗಿದೆ...

Hijab
Published on

ಉಡುಪಿ: ಉಡುಪಿಯ ಸರ್ಕಾರಿ ಮಹಿಳಾ ಜೂನಿಯರ್ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತರಗತಿಯಲ್ಲಿ ಹಿಜಾಬ್​ ಹಾಕಿಕೊಂಡು ಕೂರುತ್ತಿದ್ದೆವು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಸ್ಪಷ್ಟನೆ ನೀಡಿದ್ದಾಳೆ.

ತರಗತಿಯಲ್ಲಿ ಹಿಜಾಬ್ ಹಾಕಿಕೊಂಡೆ ಕೂರುತ್ತಿದ್ದೆವು ಎಂದು ಹಳೆಯ ಫೋಟೋವನ್ನು ಯುವತಿಯರು ವೈರಲ್ ಮಾಡಿದ್ದಾರೆ. ಆ ಫೋಟೋವನ್ನು ಸಿಎಫ್​ಐ ಸಂಘಟನೆಯ ಕಾರ್ಯಕರ್ತರು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಆದರೆ, ಈ ಬಗ್ಗೆ ಮಾತನಾಡಿರುವ ಅದೇ ಕಾಲೇಜಿನ ವಿದ್ಯಾರ್ಥಿನಿ ವೈರಲ್ ಆಗುತ್ತಿರುವ ಫೋಟೋ ನಮ್ಮ ತರಗತಿಯದಲ್ಲ ಎಂದಿದ್ದಾಳೆ. ನಮ್ಮ ತರಗತಿಯಲ್ಲಿ ಹಿಜಾಬ್ ಹಾಕಿ ಕೂರಲು ಅವಕಾಶವೇ ಇಲ್ಲ. ಕೇವಲ ಫೋಟೋ ತೆಗೆಯುವ ಉದ್ದೇಶದಿಂದ ಹಿಜಾಬ್ ಹಾಕಿ ಕುಳಿತಿರಬಹುದು ಎಂದು ಹೇಳಿದ್ದಾಳೆ.

ಈ ವಿವಾದದಿಂದಾಗಿ ನಮ್ಮ ಶೈಕ್ಷಣಿಕ ಜೀವನವೇ ಹಾಳಾಗಿದೆ. ಈ ವಿವಾದವನ್ನು ಆದಷ್ಟು ಬೇಗ ಬಗೆಹರಿಸಿ ಕಾಲೇಜು ಆರಂಭಿಸಿ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮೂವರ ವಿದ್ಯಾರ್ಥಿನಿ ಸಹಪಾಠಿ ಹೇಳಿಕೆ ನೀಡಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net