ದನ ಮೇಯಿಸಲು ಹೋಗಿ ಸಂಜೆಯಾದ್ರೂ ಬಾರದ ಪತ್ನಿ: ಹುಡುಕಿ ಹೊರಟ ಪತಿಗೆ ಕಾದಿತ್ತು ಶಾಕ್​!

Woman
Published on

ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹಿರೇಹಳ್ಳಿ ಸಮೀಪದ ಛೋಟಾಸಬಾರ ಪಾಳ್ಯ ಗ್ರಾಮದ ಬಳಿ ನಡೆದಿದೆ.

ಜಯಲಕ್ಷ್ಮಿ(35) ಮೃತ ಮಹಿಳೆ. ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಗ್ಗೆ ದನ ಮೇಯಿಸಲು ಬೆಟ್ಟದ ಬಳಿ ಜಯಲಕ್ಷ್ಮೀ ತೆರಳಿದ್ದರು. ಈ ವೇಳೆ ಮಹಿಳೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಅಪಹರಿಸಿ, ಆಕೆಯ ಮೇಲೆ ದೌರ್ಜನ್ಯ ಎಸಗಿ ಕೊಂದಿದ್ದಾರೆನ್ನಲಾಗಿದೆ.

ಸಂಜೆ 6.45 ಗಂಟೆಯಾದರೂ ಪತ್ನಿ ಮನೆಗೆ ಬಾರದಿದ್ದಾಗ ಆಕೆಯನ್ನು ಹುಡುಕಿ ಬೆಟ್ಟದ ಬಳಿ ಹೊರಟ ಪತಿ ಶಿವಕುಮಾರ ಎಂಬುವರಿಗೆ ಅಕ್ಷರಶಃ ಆಘಾತ ಕಾದಿತ್ತು. ಪತ್ನಿಯ ಮೃತದೇಹ ನೋಡಿ ಶಿವಕುಮಾರ್​ ಕುಸಿದು ಬಿದ್ದರು. ಇಡೀ ರಾತ್ರಿ ಮೃತದೇಹ ಅಲ್ಲಿಯೇ ಇತ್ತು.

ಇಂದು ಬೆಳಿಗ್ಗೆ FSL ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net