More

    ಇದೇ ಮೊದಲ ಬಾರಿಗೆ ಮೈಸೂರಲ್ಲಿ ಬಿಜೆಪಿ ದರ್ಬಾರ್​! ಮೇಯರ್​ ಆಗಿ ಸುನಂದಾ ಪಾಲನೇತ್ರ ಆಯ್ಕೆ

    ಮೈಸೂರು: ಭಾರೀ ಕುತೂಹಲ ಸೃಷ್ಟಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆಗೆ ಕೊನೆಗೂ ತೆರೆಬಿದ್ದಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಮೇಯರ್​ ಆಗಿ ಬಿಜೆಪಿಯ ಸುನಂದಾ ಪಾಲನೇತ್ರ ಅವರು ಆಯ್ಕೆಯಾಗಿದ್ದಾರೆ.

    ನಿರ್ಣಾಯಕ ಪಾತ್ರ ವಹಿಸಿದ್ದ ಜೆಡಿಎಸ್​ ನಾಮಪತ್ರ ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್​ ತಮ್ಮ ಮತಗಳನ್ನು ತಮ್ಮ ಅಭ್ಯರ್ಥಿಗೆ ಚಲಾಯಿಸಿಕೊಂಡರು. ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯರ ಬಲ ಹೊಂದಿದ್ದು ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ.

    ಬಿಜೆಪಿ ಅಭ್ಯರ್ಥಿಗೆ 26, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ ತಲಾ 22 ಮತ ಚಲಾವಣೆ ಆಗಿದೆ. ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಮೇಯರ್ ಸ್ಥಾನ ಸಿಕ್ಕಿದೆ. ಮುಂದಿನ ಮೇಯರ್​ ಸುನಂದಾ ಪಾಲನೇತ್ರ ಅವರಿಗೆ ಗೌನ್, ಹೂಗುಚ್ಛ ನೀಡಿ ಚುನಾವಣಾಧಿಕಾರಿ ಹಾಗೂ ಬಿಜೆಪಿ ನಾಯಕರು ಅಭಿನಂದಿಸಿದರು.

    ಬಿಜೆಪಿ ಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಮೈಸೂರು ಉಸ್ತುರವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿದ್ದು, ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ್ದಾರೆ.

    ಮೈಸೂರು ಮೇಯರ್​ ಚುನಾವಣೆ: ಹೀಗಿದೆ ಜೆಡಿಎಸ್-ಬಿಜೆಪಿ ನಡುವಿನ ಕೊಡು-ಕೊಳ್ಳುವಿಕೆ ಒಪ್ಪಂದ!

    ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ

    ಹಾಸ್ಟೆಲ್​ ಕೋಣೆಯಲ್ಲೇ ನೇಣಿಗೆ ಶರಣಾದ ಎಂಟೆಕ್​ ವಿದ್ಯಾರ್ಥಿನಿ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts