ಶಾಂತಿ ಕದಡುವ ಪ್ರಯತ್ನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ‌ ಹೇಳಿಕೆ

bommai
Published on

ಬೆಂಗಳೂರು: ಶಾಲೆಗಳಿಗೆ‌ ಬಾಂಬ್ ಬೆದರಿಕೆ ಸಂಬಂಧಿಸಿದಂತೆ ಸಿರಿಯಾ, ಪಾಕಿಸ್ತಾನದಿಂದ ಇ-ಮೇಲ್ ಬಂದಿರುವ ಮಾಹಿತಿಯಿಲ್ಲ. ಆಯುಕ್ತರಿಂದ ಮಾಹಿತಿ ಪಡೆಯುವೆ. ಶಾಂತಿ ಕದಡುವ ಪ್ರಯತ್ನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಉತ್ತರಿಸಿದ ಅವರು ಈ ಹಿಂದೆಯೂ ಇದೇ ರೀತಿ ಆದಾಗ ಸಂಬಂಧಿಸಿದ ದೇಶದ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಿದ ನಿದರ್ಶನಗಳಿವೆ. ಈಗಲೂ ಇಮೇಲ್ ಬಂದಿರುವ ಬಗ್ಗೆ ಹುಡುಕಿ ಪತ್ತೆ ಹಚ್ಚಲಾಗುವುದು ಎಂದರು.

ಸದ್ಯಕ್ಕೆ ತನಿಖೆ ನಡೆಯುತ್ತಿರುವ ಪ್ರಕರಣ ಹೊರತಾಗಿ‌‌ ಹಿಂದಿನ 402 ಪಿಎಸ್ ಐ‌ಗಳ ನೇಮಕ ಅಕ್ರಮದ ಬಗ್ಗೆಯೂ ತನಿಖೆ ನಡೆಸಲಾಗುವುದು. ಹೊರ‌ ಬಂದಿರುವ ಆಡಿಯೋ ಯಾರದು, ಅದರ ವಿಶ್ವಾಸಾರ್ಹತೆ ಎಷ್ಟು ಎನ್ನುವುದು ಖಚಿತವಾಗಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net