ಪ್ರೀತಿಸಿ ಮದ್ವೆಯಾಗಿದ್ದ ಮಹಿಳಾ ಟೆಕ್ಕಿ ದುರಂತ ಸಾವು: ಡೆತ್​ನೋಟ್​ನಲ್ಲಿತ್ತು ಪತಿಯ ಕರಾಳ ಮುಖ

Woman Techie
Published on

ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ನಡೆದಿದೆ.

ಸಂಗೀತಾ (26) ನೇಣಿಗೆ ಶರಣಾದ ಟೆಕ್ಕಿ. ಡೆತ್ ಬರೆದಿಟ್ಟು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ವಿನಯ್ ಕಿರುಕುಳವನ್ನು ಸಹಿಸದೇ ಸಾವಿನ ಹಾದಿ ಹಿಡಿದಿದ್ದಾಗಿ ಸಂಗೀತಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಸಂಗೀತಾ ಮತ್ತು ವಿನಯ್​ ಇಬ್ಬರು ಟೆಕ್ಕಿಗಳಾಗಿದ್ದು, ನಗರದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಅಮೃತಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತಿ ವಿನಯ್​ನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net