ತಾಯಿ-ಮಗಳಿಗೆ ಒಟ್ಟಿಗೆ ಬಲೆ ಬೀಸಿದವನ ದುರಂತ ಅಂತ್ಯ; ಮೂವರ ಬಂಧನ

1
ಬಂಧಿತ ಆರೋಪಿಗಳು ಮತ್ತು ಕೊಲೆಯಾದ ಸಿದ್ದಪ್ಪ
Published on

ಕಲಬುರಗಿ: ಮಹಿಳೆಯೊಬ್ಬಳು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪುರುಷನನ್ನು ತನ್ನ ಮತ್ತೊಬ್ಬ ಪ್ರಿಯಕರನ ಸಹಾಯದೊಂದಿಗೆ ಕೊಲೆಗೈದಿರುವ ಪ್ರಕರಣ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದ ನಿವಾಸಿ, ಲ್ಯಾಬ್ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಎಂಬಾತ ಕೊಲೆಯಾದವ.

ಕೊಲೆಯಾದ ಸಿದ್ದಪ್ಪ ಅನಸೂಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಅನಸೂಯಾ ಜೊತೆಗೆ ಆಕೆಯ ಮಗಳ ಮೇಲೂ ಕಣ್ಣು ಹಾಕಿದ್ದ. ತಾಯಿ ಮಗಳ ಜೊತೆ ಸರಸ ಆಡೋದಕ್ಕೆ ಅನಸುಯಾಗೆ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ. ಸಿದ್ದಪ್ಪನ ಕಾಟ ತಾಳಲಾರದೆ ಅವನನ್ನು ಕೊಲೆ ಮಾಡುವುದಕ್ಕೆ ಅನಸೂಯ ಪ್ಲ್ಯಾನ್ ಮಾಡಿದಳು. ತನ್ನ ಮತ್ತೊಬ್ಬ ಪ್ರಿಯಕರ ಶಿವಕುಮಾರ್ ಜೊತೆ ಸೇರಿ ರಾಡ್​​ನಿಂದ ಹೊಡೆದು ಕೊಲೆ ಮಾಡಿದ್ದಾಳೆ.

ಕೊಲೆ ಮಾಡಿದ್ರೆ 50 ಸಾವಿರ ರೂಪಾಯಿ ಕೊಡ್ತೀನಿ ಅಂತ ಮತ್ತೊಬ್ಬ ಆರೋಪಿ ಗೋವಿಂದ್ ಎಂಬುವನನ್ನು ಶಿವಕುಮಾರ್ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಅಪರಾಧದಲ್ಲಿ ಭಾಗಿಯಾದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನಸೂಯಾ, ಶಿವಕುಮಾರ್ ಮತ್ತು ಗೋವಿಂದ್ ಬಂಧಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net