ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ

ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡಿ ತಿಳಿವಿಲ್ಲದ ಮಕ್ಕಳಿಗೆ ತಮ್ಮ ಪರಂಪರೆಯಲ್ಲಿ ಬಂದ ಆಹಾರ ಕ್ರಮವನ್ನು ಬದಲಿಸುವಂತೆ ಮಾಡಬಾರದು ಎಂದವರು ಹೇಳಿದ್ದಾರೆ. ಉಡುಪಿಯಲ್ಲಿ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಶ್ರೀಗಳು, “ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವು ಇರುವುದಿಲ್ಲ. ಅಂಥವರಿಗೆ ಸರತಿಯಲ್ಲಿ ಹಾಕಿದ್ದನ್ನು ಆಯ್ಕೆ ಮಾಡಿಕೊಳ್ಳಲು ಗೊತ್ತಾಗುವುದಿಲ್ಲ. ತಮ್ಮ ಪರಂಪರೆಯಿಂದ ರೂಢಿಸಿಕೊಂಡು ಬಂದಿರುವ ಆಹಾರ ಕ್ರಮವನ್ನು ಬದಲಿಸಬಾರದು. ಹೀಗಾಗಿ ಸರಕಾರ … Continue reading ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ