More

    ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ

    ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡಿ ತಿಳಿವಿಲ್ಲದ ಮಕ್ಕಳಿಗೆ ತಮ್ಮ ಪರಂಪರೆಯಲ್ಲಿ ಬಂದ ಆಹಾರ ಕ್ರಮವನ್ನು ಬದಲಿಸುವಂತೆ ಮಾಡಬಾರದು ಎಂದವರು ಹೇಳಿದ್ದಾರೆ.

    ಉಡುಪಿಯಲ್ಲಿ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಶ್ರೀಗಳು, “ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವು ಇರುವುದಿಲ್ಲ. ಅಂಥವರಿಗೆ ಸರತಿಯಲ್ಲಿ ಹಾಕಿದ್ದನ್ನು ಆಯ್ಕೆ ಮಾಡಿಕೊಳ್ಳಲು ಗೊತ್ತಾಗುವುದಿಲ್ಲ. ತಮ್ಮ ಪರಂಪರೆಯಿಂದ ರೂಢಿಸಿಕೊಂಡು ಬಂದಿರುವ ಆಹಾರ ಕ್ರಮವನ್ನು ಬದಲಿಸಬಾರದು. ಹೀಗಾಗಿ ಸರಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ. ಮಕ್ಕಳೊಳಗೆ ಮತಭೇದ ಉಂಟಾಗುವಂತೆ ಮಾಡಬಾರದು” ಎಂದರು.

    ಇದನ್ನೂ ಓದಿ: ಆಯ್ತು ಬನ್ನಿ ಅಂದ್ರಂತೆ ಮನುರಂಜನ್ ರವಿಚಂದ್ರನ್​, ಅಭಿಮಾನಿಗಳಿಗೆ ಖುಷಿಯೋ ಖುಷಿ…

    “ಯಾರು ಏನು ಸೇವಿಸುತ್ತಾರೋ ಅದರ ಖರ್ಚನ್ನು ಬೇಕಾದರೆ ಸರಕಾರ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕೋಸರ. ಅಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರಕಾರ ಮಾಡಬಾರದು” ಎಂದು ಪೇಜಾವರ ಶ್ರೀಗಳು ಹೇಳಿದರು.

    ಮತಾಂತರಕ್ಕೆ ಕಾನೂನು ನಿಗ್ರಹ: ಮತಾಂತರ ನಿಷೇಧ ಕಾಯ್ದೆ ಬಗೆಗೆ ಅಭಿಪ್ರಾಯ ಕೇಳಿದಾಗ, ಬುಧವಾರದಂದು ಮಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರದ ಹಾವಳಿಯು ಇಡೀ ಮನೆಯನ್ನೇ ಬಲಿತೆಗೆದುಕೊಂಡಿದೆ. ಈ ಹಾವಳಿಯನ್ನು ಕಾನೂನಿನ ಮೂಲಕ ಸರಕಾರ ನಿಗ್ರಹಿಸಬೇಕು ಎಂದರು.

    ಇದನ್ನೂ ಓದಿ: ‘ಮಾರ್ಟಿನ್’ ನಲ್ಲಿ ಹೇಗಿರಲಿದೆ ನಟ ಧ್ರುವ ಸರ್ಜಾ ಲುಕ್? ಪೋಟೋ ವೈರಲ್!

    ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಒತ್ತಡ, ಆಮಿಷ ಅಥವಾ ಬಲವಂತದಿಂದ ಮತಾಂತರ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಇದು ಮನೆ, ಕುಟುಂಬ ಮತ್ತು ಸಮಾಜ ಒಡೆಯುವ ಕೃತ್ಯವಾಗಿದೆ. ಕುಟುಂಬದಲ್ಲಿ, ಸಮಾಜದಲ್ಲಿ ವೈಮನಸ್ಯ ತರುವಂಥದ್ದಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಹೇಳಿದರು.

    ಮನೆ ಕಡೆಗೆ ಮಣ್ಣಿನ ಮಕ್ಕಳು! ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಪ್ರತಿಭಟನೆಗೆ ಬಿತ್ತು ತೆರೆ

    ಖ್ಯಾತ ಪ್ರವಚನಕಾರ ಡಾ.ಈಶ್ವರ ಮಂಟೂರ ಸ್ವಾಮೀಜಿ ಲಿಂಗೈಕ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts