ಮಕ್ಕಳ ಆನ್​​ಲೈನ್ ಕ್ಲಾಸ್​ಗೆ ತೊಂದರೆ: ಸಾರ್ವಜನಿಕರ ದೂರಿನ ಬೆನ್ನಲ್ಲೇ ಬೀದಿ ವ್ಯಾಪಾರಿಗಳ ಮೈಕ್ ಜಪ್ತಿ

Mic
Published on

ಬೆಂಗಳೂರು: ಸಾರ್ವಜನಿಕರ ದೂರಿನ ಮೇಲೆ ಬೀದಿ ತರಕಾರಿ ವ್ಯಾಪಾರಿಗಳು ಬಳಸುತ್ತಿದ್ದ ಮೈಕುಗಳನ್ನು ಪೂರ್ವ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.

ತರಕಾರಿ, ಪಾತ್ರೆ, ಬಟ್ಟೆ ವ್ಯಾಪಾರಕ್ಕೆ ಆಟೋ, ಸ್ಕೂಟರ್ ನಲ್ಲಿ ಬರುತ್ತಿದ್ದ ವ್ಯಾಪಾರಿಗಳು ಮೈಕ್ ಬಳಸುತ್ತಿದ್ದರು. ಇದರಿಂದ ಮಕ್ಕಳ ಆನ್​ಲೈನ್ ಕ್ಲಾಸ್ ಮತ್ತು ವೃದ್ಧರ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳು ವಾಹನಗಳಿಗೆ ಅಳವಡಿಸಿದ್ದ ಮೈಕ್ ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net