ಕಲ್ಲಂಗಡಿ ಹಣ್ಣಿನಿಂದ ಬೆಲ್ಲದ ಆವಿಷ್ಕಾರ! ಲಾಕ್​ಡೌನ್ ಸಮಸ್ಯೆ ನಡುವೆಯೇ ಹುಟ್ಟಿಕೊಂಡ ಹೊಸ ಭರವಸೆ

Watermelon Jaggery
Published on

ಶಿವಮೊಗ್ಗ: ಲಾಕ್​ಡೌನ್​​ ಸದುಪಯೋಗಪಡಿಸಿಕೊಂಡು ವಿನೂತನ ಆವಿಷ್ಕಾರ ಮಾಡಿರುವ ನಿಟ್ಟೂರಿನ ನಿವಾಸಿ, ಕಲ್ಲಂಗಡಿ ಹಣ್ಣಿನಲ್ಲಿ ಬೆಲ್ಲವನ್ನು ತಯಾರಿಸಿ, ಎಲ್ಲರ ಹುಬ್ಬೇರಿಸಿದ್ದಾರೆ.

ಹೊಸನಗರ ತಾಲೂಕಿನ‌ ನಿಟ್ಟೂರು ಗ್ರಾಮದ ನಿವಾಸಿ ಜಯರಾಮ ಶೆಟ್ಟಿ ಎಂಬುವರು ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿದ್ದಾರೆ. ಶೆಟ್ಟಿಯವರ ಈ ವಿನೂತನ ಆವಿಷ್ಕಾರಕ್ಕೆ ಸ್ನೇಹಿತರು ಸಹ ಸಾಥ್​ ನೀಡಿದ್ದಾರೆ.

ಐಡಿಯಾ ಬಂದಿದ್ದು ಹೇಗೆ?

ಲಾಕ್​​ಡೌನ್​ನಿಂದಾಗಿ ಕಲ್ಲಂಗಡಿ ಹಣ್ಣು ಮಾರಾಟವಾಗದಿದ್ದಾಗ ಕಲ್ಲಂಗಡಿ ಹಣ್ಣಿನ ಮೌಲ್ಯವರ್ಧನೆಗೆ ಜಯರಾಮ ಮುಂದಾದರು. ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿ ಅದನ್ನು ಕೊಪ್ಪರಿಗೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಲ್ಲ ತಯಾರಿಕೆ ಮಾಡಿದ್ದಾರೆ.

ಇದುವರೆಗೆ ಕಬ್ಬಿನಿಂದ ಮಾತ್ರ ಬೆಲ್ಲ ತಯಾರಿಕೆ‌ ಮಾಡಲಾಗುತಿತ್ತು. ಇದೀಗ ಕಲ್ಲಂಗಡಿ ಹಣ್ಣಿನಿಂದಲೂ ಬೆಲ್ಲ ತಯಾರಿಸಲಾಗಿದ್ದು, ಈ ಮೂಲಕ ಬೆಳೆಗಾರರಲ್ಲಿ ಹೊಸ ಭರವಸೆವನ್ನು ಮೂಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net