ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಜನ ಘರ್ ವಾಪಸಿ: ಕ್ರಿಶ್ಚಿಯನ್ ತೊರೆದು ಮರಳಿ ಹಿಂದು ಧರ್ಮ ಸೇರ್ಪಡೆ

Hindu
Published on

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಒಂದೇ ಕುಟುಂಬದ ಒಂಭತ್ತು ಜನರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ತಮ್ಮ ಮೂಲ‌ ಹಿಂದು ಧರ್ಮಕ್ಕೆ ಮರಳಿದ್ದಾರೆ.

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿ ಜಯಶೀಲನ್‌ ಕುಟುಂಬದ 9 ಸದಸ್ಯರು ಹಿಂದು ಧರ್ಮಕ್ಕೆ ಮರಳಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಭಜರಂಗದಳ ನೇತೃತ್ವದಲ್ಲಿ ಜನ್ನಾಪುರದ ಶ್ರೀರಾಮ ಭಜನಾ ಮಂದಿರದಲ್ಲಿ ಅರ್ಚಕ ಕೃಷ್ಣಮೂರ್ತಿ ಸೋಮಯಾಜಿ ಹಾಗೂ ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಹಿಂದು ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.

ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್‌ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಹಿಂದೂ ಧರ್ಮದ ಪ್ರಮುಖರು ಹಿಂದು ಧರ್ಮಕ್ಕೆ ಮರಳಿದ ಕುಟುಂಬ ಸದಸ್ಯರನ್ನು ಅಭಿನಂದಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net