ಭಗ್ನಗೊಂಡ ಸ್ಥಳದಲ್ಲೇ ಮತ್ತೊಂದು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ: ಎಂಇಎಸ್​ಗೆ ಕನ್ನಡಿಗರ ತಿರುಗೇಟು

Rayanna
Published on

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಂಡ ಸ್ಥಳದಲ್ಲೇ ಮತ್ತೊಂದು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಎಂಇಎಸ್​ ಪುಂಡರಿಗೆ ಕನ್ನಡಿಗರು ತಿರುಗೇಟು ನೀಡಿದ್ದಾರೆ.

ಮೊನ್ನೆ (ಡಿ.17) ತಡರಾತ್ರಿ ನಾಡದ್ರೊಹಿ ಎಂಇಎಸ್ ಪುಂಡರು ಬೆಳಗಾವಿಯ ಅನಗೊಳದ ಕನಕದಾಸ ಕಾಲೋನಿಯಲ್ಲಿರುವ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿದ್ದರು. ಇದರಿಂದ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇಂದು ಅದೇ ಜಾಗದಲ್ಲಿ ಸಮಾಜದ ಮುಖಂಡರು ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎಂಇಎಸ್​ ಪುಂಡರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಕುಂಬಮೇಳದೊಂದಿಗೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಕುಂಭಮೇಳ ಹೊತ್ತು ಬಂದ ತಾಯಂದಿರು ಹಾಗೂ ಸಮಾಜದ ಮುಖಂಡರು ಸಂಭ್ರಮಿಸಿದ್ದಾರೆ. ಬಳಿಕ ಮೂರ್ತಿಗೆ ಜಲಾಭೀಷೇಕ ಹಾಗೂ ಕ್ಷೀರಾಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ಜೈ ಜೈ ರಾಯಣ್ಣ ಜೈ ಜೈ ಚನ್ನಮ್ಮ ಎಂದು ಇದೇ ಸಂದರ್ಭದಲ್ಲಿ ಘೋಷಣೆ ಕೂಗಿದರು.

ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕೂಗಿದರು. ಕನಕದಾಸ ಕಾಲೋನಿಯ ನೂರಾರು ಜನರು ಭಾಗಿಯಾಗಿದ್ದು, ಸ್ಥಳದಲ್ಲಿ ಬೀಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net