More

    ಹೆಂಗಸರ ಒಳಉಡುಪನ್ನು ಮಾಸ್ಕ್​ ರೀತಿ ಧರಿಸಿ ವಿಮಾನವೇರಿದ ವ್ಯಕ್ತಿ: ಆತನ ಉತ್ತರ ಕೇಳಿ ಸಿಬ್ಬಂದಿ ಶಾಕ್​!

    ಫ್ಲೊರಿಡಾ: ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ವಿಮಾನ ಮತ್ತು ಟ್ರೈನ್​ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆಯಲ್ಲಿ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಕೋವಿಡ್​ ನೆಗಿಟಿವ್​ ರಿಪೋರ್ಟ್​ ಮತ್ತು ಬೋರ್ಡಿಂಗ್​ ಪಾಸ್​ ತೋರಿಸಿದರೆ ಮಾತ್ರ ಪ್ರಯಾಣಿಕರನ್ನು ವಿಮಾನದೊಳಗೆ ಬಿಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಎಲ್ಲರು ಕಟ್ಟುನಿಟ್ಟಾಗಿ ಕೋವಿಡ್​ ನಿಯಮಗಳನ್ನು ಪಾಲಿಸುತ್ತಿದ್ದಾರಾ ಎಂದು ಪ್ರತಿನಿತ್ಯ ವಿಮಾನದಲ್ಲಿ ತಪಾಸಣೆ ಕೂಡ ನಡೆಸಲಾಗುತ್ತಿದೆ. ಹೀಗಿರುವಾಗ ಪ್ರಯಾಣಿಕನೊಬ್ಬ ಮಹಿಳೆಯರ ಒಳಉಡುಪನ್ನು ಮಾಸ್ಕ್​ ರೀತಿ ಧರಿಸಿ ವಿಮಾನವೇರಿ ಅಲ್ಲಿನ ಸಿಬ್ಬಂದಿಗೆ ಮತ್ತು ಸಹಪ್ರಯಾಣಿಕರಿಗೆ ಶಾಕ್​ ನೀಡಿದ್ದಾರೆ.

    ಒಳಉಡುಪಿನ ಮಾಸ್ಕ್​ ಧರಿಸಿದ್ದ ಪ್ರಯಾಣಿಕನನ್ನು ಆ್ಯಡಂ ಜಾನೆ (38) ಎಂದು ಗುರುತಿಸಲಾಗಿದೆ. ಈತ ಯುಎಸ್​ಎನ ಫ್ಲೊರಿಡಾದಲ್ಲಿರುವ ಫೋರ್ಟ್​ ಲೌಡರ್ಡೇಬಲ್​ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಮಾಸ್ಕ್​ ಧರಿಸಿ ವಿಮಾನವೇರಿದ್ದ. ಈ ರೀತಿಯ ಮಾಸ್ಕ್​ ಏಕೆ ಧರಿಸಿದ್ದೀರಿ ಎಂದು ಸಿಬ್ಬಂದಿ ಪ್ರಶ್ನಿಸಿದಾಗ ಆತ ನೀಡಿದ ಉತ್ತರ ಕೇಳಿ ಸಿಬ್ಬಂದಿ ಆಘಾತಕ್ಕೆ ಒಳಗಾಗಿದ್ದಾರೆ.

    ವಿಮಾನದ ಒಳಗೆ ತಿನ್ನಲು ಮತ್ತು ಕುಡಿಯಲು ಮಾಸ್ಕ್​ ತೆಗೆಯಲು ಅನುಮತಿ ನೀಡುವಾಗ ಪ್ರಯಾಣದ ಉದ್ದಕ್ಕೂ ವಿಮಾನದ ಒಳಗೆ ಮಾಸ್ಕ್​ ಧರಿಸುವಂತೆ ಒತ್ತಾಯ ಮಾಡುವುದು ಅಸಂಬದ್ಧ. ಆ ಅಂಸಬದ್ಧತೆಯನ್ನು ಪ್ರದರ್ಶಿಸಲು ಈ ರೀತಿ ಮಾಡಿದೆ. ಅಸಂಬದ್ಧತೆಯ ಬಗ್ಗೆ ತಿಳಿಹೇಳಲು ಅಸಂಬದ್ಧತೆಯೇ ಸರಿಯಾದ ದಾರಿ. ಹೀಗಾಗಿ ನಾನು ಈ ಮಾಸ್ಕ್​ ಧರಿಸಿ ಬಂದೆ ಎಂದು ಆ್ಯಡಂ ಜಾನೆ ಹೇಳಿದ್ದಾರೆ.

    ವಿಮಾನದ ಒಳಗೆ ನಡೆದ ಪ್ರಸಂಗವನ್ನು ಮತ್ತೊಬ್ಬ ಸಹ ಪ್ರಯಾಣಿಕ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಆ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಒಳಉಡುಪಿನ ಮಾಸ್ಕ್​ ಧರಿಸಿ ವಿಮಾನ ಸೀಟಿನಲ್ಲಿ ಆ್ಯಡಂ ಜಾನೆ ಕುಳಿತುಕೊಳ್ಳವ ದೃಶ್ಯವಿದೆ. ಬಳಿಕ ಅದನ್ನು ವಿಮಾನದ ಸಿಬ್ಬಂದಿ ಪ್ರಶ್ನಿಸುತ್ತಾರೆ ಮತ್ತು ಆತನನ್ನು ಬಲವಂತದಿಂದ ವಿಮಾನದಿಂದ ಕಳಗೆ ಇಳಿಸುತ್ತಾರೆ. ಅಲ್ಲದೆ, ಆತನನ್ನು ವಿಮಾನ ನಿಲ್ದಾಣದಿಂದಲೇ ಬ್ಯಾನ್​ ಮಾಡಿದ್ದಾರೆ.

    ಈ ಹಿಂದಿನ ವಿಮಾನಗಳಲ್ಲೂ ಜಾನೆ ಇದೇ ರೀತಿ ಮಾಡಿದ್ದಾನಂತೆ. ಇದೊಂದು ಮಾಸ್ಕ್​, ಇದು ತನ್ನ ಕೆಲಸವನ್ನು ಸರಿಯಾಗಿಯೇ ಮಾಡುತ್ತದೆ ಎಂದಿದ್ದನಂತೆ. ಪ್ರತಿ ವಿಮಾನದಲ್ಲೂ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದರು. ಕೆಲವರು ನನ್ನನ್ನು ವಿರೋಧಿಸಿದರೆ, ಇನ್ನು ಕೆಲವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಜಾನೆ ಹೇಳಿಕೊಂಡಿದ್ದಾರೆ. ಸದ್ಯ ಆತನ ಟಿಕೆಟ್​ ದರವನ್ನು ಏರ್​ಲೈನ್ಸ್​ ಕಂಪನಿ ಮರುಪಾವತಿ ಮಾಡಿದ್ದು, ಮತ್ತೊಂದು ವಿಮಾನದ ಮೂಲಕ ತಾನು ತೆರಳಬೇಕಿದ್ದ ಪ್ರದೇಶವನ್ನು ತಲುಪಿದ್ದಾರೆ. (ಏಜೆನ್ಸೀಸ್​)

    ಸ್ನೇಹಿತನ ಫ್ಲ್ಯಾಟ್​ಗೆ ರಾತ್ರಿ ಯುವತಿಯರ ಭೇಟಿ: ಮೋಜು ಮಸ್ತಿ ಬೆನ್ನಲ್ಲೇ ಮಧ್ಯರಾತ್ರಿ ನಡೆಯಿತು ಮಹಾ ದುರಂತ

    ಅಪಘಾತದ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಗೋಲ್ಡನ್​ ಅವರ್​ನಲ್ಲಿ ಉಚಿತ ಚಿಕಿತ್ಸೆ: ಸಿಎಂ ಸ್ಟಾಲಿನ್​ ಘೋಷಣೆ

    ಬೆಳಗಾವಿಯಲ್ಲಿ MES ಪುಂಡರ ಪುಂಡಾಟ ಸಮರ್ಥಿಸಿಕೊಂಡ ಸಿಎಂ ಉದ್ಧವ್​ ಠಾಕ್ರೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts