More

    ಸ್ನೇಹಿತನ ಫ್ಲ್ಯಾಟ್​ಗೆ ರಾತ್ರಿ ಯುವತಿಯರ ಭೇಟಿ: ಮೋಜು ಮಸ್ತಿ ಬೆನ್ನಲ್ಲೇ ಮಧ್ಯರಾತ್ರಿ ನಡೆಯಿತು ಮಹಾ ದುರಂತ

    ಹೈದರಾಬಾದ್​: ನಿನ್ನೆ (ಡಿ.18) ನಸುಕಿನ ಜಾವ 3.30ರ ಸಮಯದಲ್ಲಿ ಗಾಚಿಬೌಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದರು ಹಾಗೂ ಓರ್ವ ಬ್ಯಾಂಕ್​ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ. ನಸುಕಿನ ಜಾವವೇ ಕಣ್ತೆರೆದ ಮೂವರು, ಸೂರ್ಯ ಉದಯಿಸುವುದಕ್ಕೂ ಮುನ್ನವೇ ಶಾಶ್ವತ ಕಣ್ಣ ಮುಚ್ಚಿದ್ದಾರೆ. ಕಲಾವಿದರಾಗಿ ಸಾಕಷ್ಟು ಕನಸು ಕಂಡಿದ್ದ ಇಬ್ಬರು ತಮ್ಮ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡಿರುವುದು ದುರ್ದೈವದ ಸಂಗತಿಯಾಗಿದೆ.

    ಮಾನಸ ಎಂ (21) ಮತ್ತು ಮಾನಸ ಎನ್​ (23) ಮತ್ತು ಬ್ಯಾಂಕ್​ ಉದ್ಯೋಗಿ ಅಬ್ದುಲ್​ ರಹೀಮ್​ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿ ಸಿಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಯಿ ಸಿಧು ಸೀರಿಯಲ್​ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ. ಈತ ಗಾಚಿಬೌಲಿಯ ಜೆ.ವಿ. ಕಾಲನಿಯಲ್ಲಿ ವಾಸವಿದ್ದ. ಅಬ್ದುಲ್​ ರಹೀಮ್​ ವಿಜಯವಾಡ ಮೂಲದವನಾಗಿದ್ದು, ಮಧಪುರ್​ನ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿ ಆಗಿದ್ದ.

    ಮಾನಸ ಎಂ ಮತ್ತು ಮಾನಸ ಎನ್​ ಅಮರಪೇಟೆಯ ಹಾಸ್ಟೆಲ್​ನಲ್ಲಿ ವಾಸವಿದ್ದರು. ಇಬ್ಬರು ಟಿವಿ ಸೀರಿಯಲ್​ನಲ್ಲಿ ಕಿರಿಯ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಮಾನಸ ಎನ್​ ಬೆಂಗಳೂರು ಮೂಲದವಳು. ಅವಳ ತಂದೆ ಸಿ.ಎಂ. ನಾರಾಯಣಮೂರ್ತಿ ಓರ್ವ ರಾಜಕಾರಣಿ. ಮೂರು ದಿನಗಳ ಹಿಂದಷ್ಟೇ ಸಿಧು ಫ್ಲ್ಯಾಟ್​ಗೆ ಬಂದಿದ್ದಳು.

    ಮಾನಸ ಎಂ, ಸಾಯಿ ಸಿಧುಗೆ ಇನ್​ಸ್ಟಾಗ್ರಾಂ ಮೂಲಕ ಪರಿಚಿತಳಾಗಿದ್ದಳು. ಶುಕ್ರವಾರ ಬೆಳಗ್ಗೆ ಸಿಧು ಫ್ಲ್ಯಾಟ್​ಗೆ ಬಂದಿದ್ದಳು. ಅಬ್ದುಲ್​​ ಅದೇ ಫ್ಲ್ಯಾಟ್​ಗೆ ಸಂಜೆ ಭೇಟಿ ನೀಡಿದ್ದ. ಸಿಧು ಹೊರತುಪಡಿಸಿ ಉಳಿದ ಮೂವರು ಶುಕ್ರವಾರ ರಾತ್ರಿ ಮದ್ಯಪಾನ ಮಾಡಿದ್ದರು. ಬಳಿಕ ಮಧ್ಯರಾತ್ರಿ ಟೀ ಕುಡಿಯಲೆಂದು ಕಾರು ತೆಗೆದುಕೊಂಡು ಹೊರ ಹೋಗಿದ್ದಾರೆ. ಕಾರು ಚಲಾಯಿಸಿದ ಅಬ್ದುಲ್​, ಮದ್ಯದ ಅಮಲಿನಲ್ಲಿದ್ದ. ಅವನ ಪಕ್ಕದ ಸೀಟಿನಲ್ಲಿ ಸಾಯಿ ಸಿಧು ಕುಳಿತಿದ್ದ. ಹಿಂಬದಿ ಸೀಟಿನಲ್ಲಿ ಮಾನಸ ದ್ವೈಯರು ಕುಳಿತಿದ್ದರು. ಮೊದಲೇ ಮತ್ತಿನಲ್ಲಿದ್ದ ಅಬ್ದುಲ್​ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಸಿಧು ಹೇಳಿದರೂ ಅವನ ಮಾತಿಗೆ ಕ್ಯಾರೆ ಎನ್ನಲಿಲ್ಲ. ಸುಮಾರು 2.10ರ ಸಮಯದಲ್ಲಿ 140 ಕಿ.ಮೀ ವೇಗದಲ್ಲಿದ್ದ ಕಾರು ಅಬ್ದುಲ್​ ನಿಯಂತ್ರಣ ತಪ್ಪಿ ಹೈದರಾಬಾದ್​ನ ಕೇಂದ್ರೀಯ ವಿಶ್ವವಿದ್ಯಾಲಯದ ಬಳಿಯಿರುವ ರೇಣುಕಾ ಎಲ್ಲಮ್ಮ ದೇವಸ್ಥಾನದ ಪಕ್ಕದ ಮರ ಒಂದಕ್ಕೆ ಡಿಕ್ಕಿ ಹೊಡೆದು ಎರಡು ಭಾಗವಾಯಿತು. ಸ್ಥಳದಲ್ಲೇ ಮಾನಸ ದ್ವೈಯರು ಮತ್ತು ಅಬ್ದುಲ್​ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಸಾಯಿ ಸಿಧುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಾನಸ ದ್ವೈಯರು ಗುದ್ದಿದ ರಭಸಕ್ಕೆ ಕಾರಿನಿಂದ ಹೊರಕ್ಕೆ ಹಾರಿದರೆ, ಅಬ್ದುಲ್​ ಡ್ರೈವರ್​ ಸೀಟಿನಲ್ಲೇ ಸಿಲುಕಿಕೊಂಡಿದ್ದ. ಬಲೂನ್​ ತೆರೆದುಕೊಂಡಿದ್ದರಿಂದ ಸಾಯಿ ಸಿಧು ಬದುಕುಳಿದಿದ್ದಾನೆ. ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಪ್ರಕಾರ ಕೆಲವೇ ದಿನಗಳ ಹಿಂದಷ್ಟೇ ಅಬ್ದುಲ್​ ಕಾರನ್ನು ಬಾಡಿಗೆ ಪಡೆದಿದ್ದ ಎಂದು ತಿಳಿದುಬಂದಿದೆ.

    ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಇಂಟರ್ ಸ್ಟಡಿ ಮಾಡುತ್ತಿರುವಾಗ ಎನ್.ಮಾನಸ ನನ್ನ ಸಹಪಾಠಿಯಾಗಿದ್ದಳು. ವಾರದ ಹಿಂದೆ ಹೈದರಾಬಾದ್‌ಗೆ ಹೋಗಿದ್ದಳು ಮತ್ತು ಬೆಂಗಳೂರಿನ ನನ್ನ ರೂಮಿನ ಬೀಗವನ್ನು ಕೇಳಿದಾಗ ನಾನು ಬೆಂಗಳೂರಿಗೆ ಹೋಗಿದ್ದೇನೆ ಎಂದು ಹೇಳಿದ್ದಳು. ಆದರೆ, ಅವಳು ನನ್ನ ಸ್ನೇಹಿತ ಸಿಧು ಜೊತೆ ಇದ್ದಾಳೆ ಅಂತ ಗೊತ್ತಿರಲಿಲ್ಲ. ಅಪಘಾತ ಸಂಭವಿಸಿದೆ ಎಂದು ನನಗೆ ತಿಳಿಯಿತು ಎಂದು ಮಾನಸ ಸ್ನೇಹಿತೆ ಪ್ರೀತಿಕಾ ಹೇಳಿದ್ದಾರೆ. (ಏಜೆನ್ಸೀಸ್​)

    ನಸುಕಿನ ಜಾವವೇ ಕಣ್ತೆರೆದ ಜೂ. ಆರ್ಟಿಸ್ಟ್​ ಇಬ್ಬರು ಸೂರ್ಯೋದಯಕ್ಕೂ ಮುನ್ನವೇ ದುರಂತ ಅಂತ್ಯ

    ಸರ್ಕಾರಿ ಕೆಲ್ಸಕ್ಕೆ ಸೇರಿದ ಎಂಟೇ ದಿನಕ್ಕೆ ಯುವತಿ ದುರ್ಮರಣ: ದಿನಗೂಲಿ ನೌಕರನ ಆಸೆಗೆ ಬಲಿಯಾಯ್ತು ಜೀವ

    ಶ್ವಾನಗಳ ಮೇಲೆ ಮಂಗಗಳ ಸೇಡು!; ಮಹಾರಾಷ್ಟ್ರದಲ್ಲಿ ಕೋತಿಮರಿಯ ಹತ್ಯೆಗೆ ನಾಯಿಮರಿಗಳ ಬೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts