ನಸುಕಿನ ಜಾವವೇ ಕಣ್ತೆರೆದ ಜೂ. ಆರ್ಟಿಸ್ಟ್​ ಇಬ್ಬರು ಸೂರ್ಯೋದಯಕ್ಕೂ ಮುನ್ನವೇ ದುರಂತ ಅಂತ್ಯ

Junior Artist
Published on

ಹೈದರಾಬಾದ್​: ಗಾಚಿಬೌಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದರು ಹಾಗೂ ಓರ್ವ ಬ್ಯಾಂಕ್​ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಇಂದು (ಡಿ.18) ನಸುಕಿನ ಜಾವ 3.30ರ ಸಮಯದಲ್ಲಿ ಅಪಘಾತ ನಡೆದಿದೆ.

ಮಾನಸ ಎನ್​
ಮಾನಸ ಎನ್​

ಮಾನಸ ಎಂ (21) ಮತ್ತು ಮಾನಸ ಎನ್​ (23) ಮತ್ತು ಬ್ಯಾಂಕ್​ ಉದ್ಯೋಗಿ ಅಬ್ದುಲ್​ ರಹೀಮ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿ ಸಿಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸ ಎಂ ಮತ್ತು ಮಾನಸ ಎನ್​ ಅಮರಪೇಟೆಯ ಹಾಸ್ಟೆಲ್​ನಲ್ಲಿ ವಾಸವಿದ್ದರು. ಇಬ್ಬರು ಟಿವಿ ಸೀರಿಯಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಬ್ದುಲ್​ ರಹೀಮ್​ (25) ವಿಜಯವಾಡ ಮೂಲದವನಾಗಿದ್ದು, ಮಧಪುರ್​ನ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿ ಆಗಿದ್ದ.

ಮಾನಸ ಎನ್​
ಮಾನಸ ಎನ್​

ಕಾರು ಗಾಚಿಬೌಲಿಯಿಂದ ಲಿಂಗಂಪಲ್ಲಿಗೆ ಪ್ರಯಾಣಿಸುತ್ತಿತ್ತು. ಅಬ್ದುಲ್​ ಕಾರು ಚಲಾಯಿಸುತ್ತಿದ್ದ. ಕಾರು ಅತಿವೇಗದಲ್ಲಿದ್ದರಿಂದ ಸ್ಟೀರಿಂಗ್​ ನಿಯಂತ್ರಣ ಕಳೆದುಕೊಂಡ ಅಬ್ದುಲ್​, ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.​ ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಕಾರು ಚಾಲಕ ಅಬ್ದುಲ್​ ಮದ್ಯಪಾನ ಮಾಡಿದ್ದ ಎಂದು ಗಾಯಾಳು ಸಿಧು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net