ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!

Police
Published on

ಬೆಂಗಳೂರು: ಸಂಚಾರಿ ಪೊಲೀಸ್​ ಆಯುಕ್ತರಾದ ರವಿಕಾಂತೇಗೌಡರ ಗಮನಕ್ಕೆ ಬರಲೇಬೇಕಾದ ಸ್ಟೋರಿ ಇದು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.

ರವಿಕಾಂತೇಗೌಡ ಅವರ ಅಭಿಮಾನಿ ಅಂತಾ ಹೇಳಿಕೊಂಡು ಅನೇಕ ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ವ್ಯಕ್ತಿಯ ಬೈಕ್ ಮೇಲೆ ರವಿಕಾಂತೇಗೌಡರ ಹೆಸರಿನ ಜತೆಗೆ ಅವರ ಸ್ಥಾನದ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ. ಅದು ಸಾಲದ್ದಕ್ಕೆ ಪ್ರೆಸ್​ ಅಂತ ಬರೆಸಿಕೊಂಡು ಫೈನ್​ ಕಟ್ಟದೇ ನಗರದಲ್ಲಿ ಸುತ್ತಾಡುತ್ತಿದ್ದಾರೆ.

ಇದು KA 05 JS 2581 ನಂಬರಿನ ಆಕ್ಟೀವಾ ಬೈಕ್ ಸವಾರರ ಕತೆಯಾಗಿದೆ. ಈ ಬೈಕ್​ನ ಮೇಲೆ ಇದುವರೆಗೂ 42 ಕೇಸ್​ಗಳಿದ್ದು‌ 20200 ರೂಪಾಯಿ ದಂಡ ಇದೆ. ಯಾರಾದ್ರೂ ಪೊಲೀಸ್​ ಸಿಬ್ಬಂದಿ ಬೈಕ್ ಹಿಡ್ಕೊಂಡ್ರೆ ರವಿಕಾಂತೇಗೌಡರ ಹೆಸರು ಹೇಳ್ತಾರಂತೆ. ಪಾಪ ಎಎಸ್ಐ ಮಟ್ಟದ ಅಧಿಕಾರಿಗಳು ಆಯುಕ್ತರ ಪರಿಚಯ ಇರಬಹುದು ಅಂತಾ ಬಿಟ್ಟು ಕಳಿಸುತ್ತಿದ್ದಾರೆ.

ಪೊಲೀಸ್​ ಸಿಬ್ಬಂದಿಯೇ ರೂಲ್ಸ್ ಬ್ರೇಕ್ ಮಾಡಿರುವ ಅನೇಕ‌ ಪೋಟೋಗಳನ್ನು ಸಾರ್ವಜನಿಕರು ತೆಗೆದಿದ್ದಾರೆ. ಯಾವೊಂದು ಪೋಟೋದಲ್ಲಿಯೂ ಈತ ಹೆಲ್ಮೆಟ್ ಧರಿಸಿಲ್ಲ ಹಾಗೂ ರೂಲ್ಸ್ ಫಾಲೋ ಮಾಡಿಲ್ಲ. ಬೈಕ್ ಡೀಟೆಲ್ಸ್ ನೋಡಿದ್ರೆ ಪರಮೇಶ ಅನ್ನೋ ಹೆಸರು ತೋರಿಸ್ತಾ ಇದೆ. ಇನ್ನಾದ್ರೂ ಈತನ ಮೇಲೆ ಕ್ರಮಕ್ಕೆ ರವಿಕಾಂತೇಗೌಡರು ಸೂಚನೆ ಕೊಡುವುದು ಒಳ್ಳೆಯದು. ಇಲ್ಲದಿದ್ದರೆ ಇನ್ನಷ್ಟು ದಿನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net