ರೈಲಿಗೆ ತಲೆಕೊಟ್ಟು ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಪುತ್ರ ಆತ್ಮಹತ್ಯೆಗೆ ಶರಣು!

RMG Youth
Published on

ರಾಮನಗರ: ಎಲ್.ಎಲ್.ಬಿ ಪದವೀಧರನೊಬ್ಬ ರೈಲಿಗೆ ಆತ್ಮಹತ್ಯೆ ಶರಣಾಗಿದ್ದಾನೆ. ಚನ್ನಪಟ್ಟಣದಿಂದ ತಿಟ್ಟಮಾರನಹಳ್ಳಿಗೆ ಹೋಗುವ ರಸ್ತೆಯ ಅಂಡರ್ ಪಾಸ್‌ ಬಳಿ ಘಟನೆ ನಡೆದಿದೆ.

ಸುಖೇಶ್ (19) ಮೃತ ಯುವಕ. ಈತ ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಅವರ ಪುತ್ರ. ಕನಕಪುರ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮದ ನಿವಾಸಿಯಾದ ಸುಖೇಶ್​, ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿದ್ದ.

ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಚನ್ನಪಟ್ಟಣ ಪುರ ಠಾಣೆ ಪೊಲೀಸರು ಹಾಗೂ ರೈಲ್ವೆ ಇಲಾಖೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net