ಆಯುಧ ಪೂಜೆ ದಿನ ರಸ್ತೆ ಪಕ್ಕ ಹೂ ಮಾರ್ತಿದ್ದ ವ್ಯಕ್ತಿಗೆ ಕಾರಿನ ರೂಪದಲ್ಲಿ ಬಂದೆರಗಿದ ಜವರಾಯ: ಇಬ್ಬರು ಸಾವು

Car Accident
Published on

ರಾಮನಗರ: ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಹೂ ಮಾರುವ ವ್ಯಕ್ತಿ ಮತ್ತು ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಮನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕನಿಗೂ ಗಾಯವಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ರಿಡ್ಜ್ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ಹೂ ಮಾರುತ್ತಾ ನಿಂತ್ತಿದ್ದ ವ್ಯಕ್ತಿಗೆ ಗುದ್ದಿದೆ. ಅಲ್ಲದೆ, ಅಲ್ಲಿಯೇ ಇದ್ದ ಬೈಕ್ ಸವಾರನಿಗೂ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಚಾಲಕನಿಗೂ ಗಾಯವಾಗಿದೆ. ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net