More

    ಪಾಕಿಸ್ತಾನಿ ಸುಂದರಿ ಬಲೆಗೆ ಬಿದ್ದಿದ್ದ ಆರ್ಮಿ ಗುಮಾಸ್ತನನ್ನು ಬಂಧಿಸಿದ ರಾಜಸ್ಥಾನ ಪೊಲೀಸರು

    ನವದೆಹಲಿ: ರಾಜಸ್ಥಾನದ ಜೋಧ್​ಪುರ್ ವಲಯದ ಮಿಲಿಟರಿ ಚೀಪ್​ ಇಂಜಿನಿಯರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಗುಮಾಸ್ತನನ್ನು ದೇಶ ದ್ರೋಹ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

    ಹನಿಟ್ರ್ಯಾಪ್​ ಬಲೆ ಬಿದ್ದು, ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಪಾಕಿಸ್ತಾನ ಮಹಿಳೆಯ ಜತೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಗುಮಾಸ್ತನನ್ನು ಬಂಧಿಸಲಾಗಿದೆ.

    ಆರೋಪಿಯನ್ನು ರಾಮ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ಗುಮಾಸ್ತನಾಗಿದ್ದು, ಮಿಲಿಟರಿ ಎಂಜಿನಿಯರಿಂಗ್ ಸೇವೆಯಲ್ಲಿ ಜೋಧಪುರ ವಲಯದ ಮುಖ್ಯ ಎಂಜಿನಿಯರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಎಂದು ರಾಜಸ್ಥಾನದ ಪೊಲೀಸ್​ ಮಹಾನಿರ್ದೇಶಕ (ಗುಪ್ತಚರ) ಉಮೇಶ್​ ಮಿಶ್ರಾ ತಿಳಿಸಿದ್ದಾರೆ.

    35 ವರ್ಷದ ಆರೋಪಿ ರಾಮ್​ ಸಿಂಗ್​ ಕಳೆದ ಎರಡು ತಿಂಗಳಿಂದ ವಾಟ್ಸ್​ಆ್ಯಪ್​ ಮೂಲಕ ಪಾಕಿಸ್ತಾನಿ ಮಹಿಳೆಯನ್ನು ಸಂಪರ್ಕಿಸಿದ್ದ. ಮಹಿಳೆಯ ಬಣ್ಣ ಬಣ್ಣದ ಮಾತಿಗೆ ಮತ್ತು ಆಕೆಯ ದೈಹಿಕ ಸೌಂದರ್ಯಕ್ಕೆ ಮಾರು ಹೋಗಿ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಾಟ್ಸ್​ಆ್ಯಪ್​ ಮೂಲಕ ಹಂಚಿಕೊಳ್ಳುತ್ತಿದ್ದ ಎಂದು ಉಮೇಶ್​ ಮಿಶ್ರಾ ಮಾಹಿತಿ ನೀಡಿದ್ದಾರೆ.

    ನಾಲ್ಕನೇ ವರ್ಗದ ಉದ್ಯೋಗಿಯಾಗಿದ್ದ ಆರೋಪಿ, ತನ್ನ ಮೊಬೈಲ್ ಫೋನ್ ಮೂಲಕ ದಾಖಲೆಗಳ ಫೋಟೋಗಳನ್ನು ಕಳುಹಿಸುತ್ತಿದ್ದನು ಎಂಬ ಮಾಹಿತಿ ಗುಪ್ತಚರರಿಂದ ಪಡೆದ ಬಳಿಕ ರಾಜಸ್ಥಾನ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಆತನ ಮೊಬೈಲ್​ ಪರಿಶೀಲನೆ ನಡೆಸಿದ ವೇಳೆ ಆತ ದಾಖಲೆಗಳನ್ನು ಕಳುಹಿಸಿರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!

    ವಿಜಯಪುರದ ಹುಡುಗಿಯ ಸಾಧನೆ: ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ರಾಜ್ಯದ ಏಕೈಕ ವಿದ್ಯಾರ್ಥಿನಿ

    ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts