ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿಂತಾರೆ: ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀ

Kodi Mutt Shree
Published on

ಹಾಸನ: ಇಲ್ಲಿತನಕ ಕಂಡು ಕೇಳರಿಯದ ಬಹುದೊಡ್ಡ ಆಘಾತ ಭಾರತದಲ್ಲಿ ಆಗಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭೀಕರ ಭವಿಷ್ಯವನ್ನು ನುಡಿದಿದ್ದಾರೆ.

ಇಂದು ಹಾಸನದ ಕೋಡಿಮಠದಲ್ಲಿ ಮಾತನಾಡಿದ ಅವರು ಮಲೆನಾಡು ಹೋಗಿ ಬಯಲಾಗುತ್ತದೆ, ಬಯಲು ಹೋಗಿ ಮಲೆನಾಡಾಗುತ್ತದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ಸಂಭವಿಸುತ್ತದೆ. ಇದರಿಂದ ಜಗತ್ತಿನ ಸಾಮ್ರಾಟರೆಲ್ಲರೂ ತಲ್ಲಣಗೊಳ್ಳುತ್ತಾರೆಂದು ಹೇಳಿದರು.

ಈ ವರ್ಷ ಮಳೆ, ಕಂಡಮಂಡಲ, ಮುಂಗಾರು ಚೆನ್ನಾಗಿ ಆಗುತ್ತದೆ. ಆದರೆ, ಹಿಂಗಾರು ಸ್ವಲ್ಪ ಕಡಿಮೆ ಆಗಲಿದೆ. ರಾಷ್ಟ್ರದಲ್ಲಿ ಅಶಾಂತಿ, ದೊಂಬಿ, ಮತೀಯ ಗಲಭೆ, ಸಾವು-ನೋವುಗಳು ಮತ್ತು ಕೊಲೆಗಳು ಹೆಚ್ಚಾಗಲಿವೆ. ಅದರಲ್ಲೂ ವಿಶೇಷವಾಗಿ ವಿದ್ಯುತ್​ ಅಪಾಯಗಳು ಹೆಚ್ಚು ಸಂಭವಿಸಲಿವೆ ಎಂದು ತಿಳಿಸಿದರು.

ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಗಳು, ರಾಜಕೀಯ ಗುಂಪುಗಳಾಗ್ತಾವೆ. ಬೆಂಕಿ, ಗಾಳಿ ಹಾಗೂ ಗುಡುಗು ಅಪಾಯ ಹೆಚ್ಚಾಗುತ್ತದೆ ಎನ್ನುವ ಮೂಲಕ ಭಯಾನಕ ಭವಿಷ್ಯವಾಣಿಯನ್ನು ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net