More

    ರಾಹುಲ್​ ಗಾಂಧಿ ಹೆಸರಿಗೆ ಫ್ರೀಯಾಗಿ 50 ಲಕ್ಷ ಮೌಲ್ಯದ ಆಸ್ತಿ ಬರೆದು 100 ಗ್ರಾಂ ಚಿನ್ನವನ್ನೂ ಕೊಟ್ಟ ವೃದ್ಧೆ!

    ಡೆಹ್ರಾಡೂನ್​: 78 ವರ್ಷದ ವೃದ್ಧೆಯೊಬ್ಬರು ತನ್ನ ಹೆಸರಲ್ಲಿದ್ದ ಬರೋಬ್ಬರಿ 50 ಲಕ್ಷ ಬೆಲೆ ಬಾಳುವ ಆಸ್ತಿಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಉಚಿತವಾಗಿ ಕೊಟ್ಟಿದ್ದಾರೆ!

    ಹೌದು, ಇಂತಹ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ, ನಿವೃತ್ತ ಶಿಕ್ಷಕಿ ಪುಷ್ಪಾ ಮುಂಜಿಯಾಲ್​ ಎಂಬುವರು ರಾಹುಲ್​ ಗಾಂಧಿ ಹೆಸರಿಗೆ ಆಸ್ತಿ ವರ್ಗಾಯಿಸಿದ್ದಾರೆ. ಇದರ ಜತೆಗೆ 10 ತೊಲೆ ಬಂಗಾರವನ್ನೂ ರಾಹುಲ್​ ಗಾಂಧಿಗೆ ಕೊಟ್ಟಿದ್ದಾರೆ. ಕಾರಣ ಏನು ಗೊತ್ತಾ?

    ವೃದ್ಧೆ ಪುಷ್ಪಾ ಮುಂಜಿಯಾಲ್​ಗೆ ರಾಹುಲ್​ ಗಾಂಧಿ ಅಂದ್ರೆ ತುಂಬಾ ಪ್ರೀತಿ, ಅಭಿಮಾನ, ಗೌರವ. ಡೆಹ್ರಾಡೂನ್​ ಕೋರ್ಟ್​ಗೆ ವಿಲ್​ ಸಲ್ಲಿಸಿ ತನ್ನ ಆಸ್ತಿಯ ಮಾಲೀಕತ್ವವನ್ನು ರಾಹುಲ್​ಗೆ ವರ್ಗಾಯಿಸಿ ‘ಮಗನಂತಿರುವ ರಾಹುಲ್​ಗೆ ನನ್ನ ಆಸ್ತಿ ಸೇರಬೇಕು. ಒಳ್ಳೆಯ ಕೆಲಸಕ್ಕೆ ಬಳಕೆಯಾಗಲಿ’ ಎಂದು ಆಶೀಸಿದ್ದಾರೆ.

    ರಾಹುಲ್​ ಗಾಂಧಿ ಹೆಸರಿಗೆ ಫ್ರೀಯಾಗಿ 50 ಲಕ್ಷ ಮೌಲ್ಯದ ಆಸ್ತಿ ಬರೆದು 100 ಗ್ರಾಂ ಚಿನ್ನವನ್ನೂ ಕೊಟ್ಟ ವೃದ್ಧೆ!

    ‘ರಾಹುಲ್​ರ ಚಿಂತನೆಗಳಿಂದ ಪ್ರಭಾವಿತಳಾಗಿರುವ ನಾನು ನನ್ನ ಆಸ್ತಿಪಾಸ್ತಿಯನ್ನು ಅವರಿಗೆ ವರ್ಗಾಯಿಸಿದ್ದೇನೆ. ರಾಹುಲ್ ​ಅವರಂಥವರು ಹಾಗೂ ಅವರು ಅನುಸರಿಸುವಂಥ ತತ್ವಗಳು ದೇಶಕ್ಕೆ ಅತ್ಯಗತ್ಯ’ ಎಂದು ವೃದ್ಧೆ ಹೇಳಿಕೊಂಡಿದ್ದಾರೆ.

    ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್‌ ಸಿಂಗ್‌ ಅವರ ನಿವಾಸಕ್ಕೆ ತೆರಳಿದ ಪುಷ್ಪಾ ಅವರು ಆಸ್ತಿ ಪತ್ರವನ್ನು ಕೊಟ್ಟು ರಾಹುಲ್‌ಗೆ ಹಸ್ತಾಂತರಿಸುವಂತೆ ಹೇಳಿದರು.

    ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

    ಢಮರುಗ ಯಾರಿಗಾದ್ರೂ ಕಿರಿಕಿರಿ ಮಾಡಿದ್ಯಾ? ಎನ್ನುತ್ತಲೇ ಧ್ವನಿವರ್ಧಕ ವಿವಾದ ಇತ್ಯರ್ಥಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್​ಡಿಕೆ

    ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts