ಪ್ರಮಿಳಾ ನಾಯ್ಡು ಅವರಿಗೆ 'ಅತ್ಯುತ್ತಮ ನಾರಿಶಕ್ತಿ ಐಕಾನ್ ಸಾಧಕ ಪ್ರಶಸ್ತಿ'

Pramila Naidu
Published on

ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರಿಗೆ 'ಅತ್ಯುತ್ತಮ ನಾರಿಶಕ್ತಿ ಐಕಾನ್ ಸಾಧಕ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ದಾದಾಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಮ - 2022 ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿದ್ದ 'ನಾರಿಶಕ್ತಿ ಐಕಾನ್ ಅಚೀವರ್ ಅವಾರ್ಡ್' ಕಾರ್ಯಕ್ರಮದಲ್ಲಿ ಪ್ರಮಿಳಾ ನಾಯ್ಡು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಅವರು ಮಹಿಳೆಯರ ರಕ್ಷಣೆ ಮತ್ತು ಸ್ವವಲಂಬನೆಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ದಾದಾಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಮ ಸ್ಥಾಪಕರಾದ ಕಲ್ಯಾಂಜಿ ಜನ ಅವರು ಪ್ರಮಿಣಾ ನಾಯ್ಡು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

Koo App
ದಿನಾಂಕ 24-05-2022ರಂದು ದೆಹಲಿಯಲ್ಲಿ ದಾದಾಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಮ - 2022 ಆಯೋಜಿಸಿದ ಅತ್ಯುತ್ತಮ ನಾರಿಶಕ್ತಿ ಐಕಾನ್ ಸಾಧಕ ಪ್ರಶಸ್ತಿ 2022ಕ್ಕೆ ಆಯ್ಕೆಯಾಗಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ಪ್ರಮಿಳಾ ನಾಯ್ಡು ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. #dadhasahebpalkeawards #dadhasahebpalkeiconawards #pramilanaidu #narishakthiicon #delhi #bangalore
View attached media content
-Pramila Naidu (@PramilaNaidu)25 May 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net