More

    ಇಂಗ್ಲಿಷ್‌ ಓದಲು ಕಷ್ಟವಾಗುತ್ತೆ ಎಂದು ಆತ್ಮಹತ್ಯೆಗೆ ಯತ್ನಿಸಿದ ತುಮಕೂರಿನ ಬಾಲಕ

    ತುಮಕೂರು: ಇಂಗ್ಲಿಷ್​ ಓದಲು ಕಷ್ಟವಾಗುತ್ತದೆ ಅಂತಾ 7ನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿ, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರಿನ ಊರ್ಡಿಗೆರೆಯಲ್ಲಿ ನಡೆದಿದೆ.

    ಅಜಯ್, ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ಈತ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಇಂಗ್ಲಿಷ್ ಓದಲು ಕಷ್ಟವಾಗುತ್ತೆ ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದ. ಆದರೆ, ಶಾಲೆಗೆ ಹೋಗುವಂತೆ ಪೋಷಕರು ಬುದ್ಧಿ ಮಾತು ಹೇಳಿದ್ದರು. ಆದರೆ, ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ನಿನ್ನೆ ಬೆಳಗ್ಗೆ 7 ಗಂಟೆ ಸಮಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ವಿಷ ಕುಡಿದ ಬಳಿಕ ಅಸ್ವಸ್ಥಗೊಂಡು ಮನೆಯಲ್ಲಿ ಕುಸಿದುಬಿದ್ದಿದ್ದ ಬಾಲಕನನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದು, ಅಜಯ್​ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್​ ಬಾಲಕ ಅಜಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಜಯ್​, ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ. ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಸೋಮಶೇಖರ್, ಕೂಲಿ ಕೆಲಸ ನಿಮಿತ್ತ ಕುಟುಂಬ ಸಮೇತ ಊರ್ಡಿಗೆರೆ ಗ್ರಾಮಕ್ಕೆ ವಲಸೆ ಬಂದಿದೆ. ಕೋತಿತೋಪು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದ ಬಾಲಕ. 7ನೇ ತರಗತಿಗೆ ಊರ್ಡಿಗೆರೆಯಲ್ಲಿ ಸೇರಿಕೊಂಡಿದ್ದ.

    ಕಳೆದ 16ನೇ ತಾರೀಕಿನಿಂದ ಶಾಲೆ ಶುರುವಾಗಿದೆ. ಒಂದೆರಡು ದಿನ ಶಾಲೆಗೆ ಹೋಗಿದ್ದ ಬಾಲಕ, ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದ. ಶಾಲೆಗೆ ಹೋಗುವಂತೆ ಪೋಷಕರು ಬಾಲಕನಿಗೆ ಒತ್ತಾಯಿಸಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತುಮಕೂರು ಬಿಇಒ ಹನುಮನಾಯಕ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕನಿಗೆ ಧೈರ್ಯ ತುಂಬಿದ್ದಾರೆ. ಸದ್ಯ ಬಾಲಕನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

    ಆಟೋದಲ್ಲಿ ಹೋಗುವಾಗ ಅಡ್ಡಗಟ್ಟಿದ ಪೊಲೀಸ್​ ಪೇದೆ ಆಡಿದ ಕೆಟ್ಟ ಮಾತು ಕೇಳಿ ನಟಿ ಅರ್ಚನಾ ಆಕ್ರೋಶ!

    ಟೆಕ್ಸಾಸ್​ ಫೈರಿಂಗ್​ ಪ್ರಕರಣ: ಶಾಲಾ ಮಕ್ಕಳ ಮೇಲಿನ ದಾಳಿಗೂ ಮುನ್ನ ದಾಳಿಕೋರ ಸುಳಿವು ಕೊಟ್ಟಿದ್ದನಾ?

    ಇದು ಸಹಾಯಕ ನಿರ್ದೇಶಕರ ಕಥೆ!; ರಿಷಬ್ ಶೆಟ್ಟಿ ಚಿತ್ರದಲ್ಲಿ ಯೋಗರಾಜ್ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts