ರಾಜ್ಯ ಪ್ರಕಾಶಕರ ಸಂಘದ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಆಯ್ಕೆ

Poornima
Published on

ಬೆಂಗಳೂರು: ವಿಶ್ವ ಪುಸ್ತಕ ದಿನದ ಅಂಗವಾಗಿ ಕರ್ನಾಟಕ ಪ್ರಕಾಶಕರ ಸಂಘ ನೀಡುವ ಎರಡು ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತೆ ಹಾಗೂ ಪ್ರಕಾಶಕಿ ಡಾ. ಆರ್. ಪೂರ್ಣಿಮಾ ಮತ್ತು ಮೈಸೂರಿನ ಪುಸ್ತಕ ಪ್ರೇಮಿ ಸಯ್ಯದ್ ಐಸಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

2021ನೇ ಸಾಲಿನ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಆರ್. ಪೂರ್ಣಿಮಾ ಅವರು ಭಾಜನರಾಗಿದ್ದಾರೆ. ಎಂ. ಗೋಪಾಲಕೃಷ್ಣ ಅಡಿಗ ಪ್ರಶಸ್ತಿಯನ್ನು ಇತ್ತೀಚೆಗೆ ಮೈಸೂರಿನ ಬೆಂಕಿ ಅನಾಹುತದಲ್ಲಿ ತನ್ನ ಪುಸ್ತಕ ಮಳಿಗೆಯನ್ನು ಕಳೆದುಕೊಂಡ ಸಯ್ಯದ್ ಐಸಾಕ್ ಅವರಿಗೆ ನೀಡಲಾಗುತ್ತಿದೆ. ಈ ಎರಡೂ ಪ್ರಶಸ್ತಿಗಳನ್ನು ಅಂಕಿತ ಹಾಗೂ ಶೃಂಗಾರ ಪ್ರಕಾಶನ ಪ್ರಾಯೋಜಿಸಿದ್ದು, ತಲಾ ಐದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net