More

    ಸಾರಿಗೆ ನೌಕರರನ್ನು ಮುಷ್ಕರಕ್ಕೆ ಪ್ರಚೋದಿಸಿದ ಆರೋಪದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಸ್​ ದಾಖಲು​

    ಬೆಂಗಳೂರು: ಹತ್ತಕ್ಕೂ ಅಧಿಕ ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆಯ ನೇತೃತ್ವ ವಹಿಸಿ, ಸರ್ಕಾರಿ ಬಸ್​ಗಳು ರಸ್ತೆಗಿಳಿಯದಂತೆ ಮಾಡಿರುವ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕೇಸ್ ದಾಖಲಾಗಿದೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಕೊಟ್ಟ ಆರೋಪದ ಮೇಲೆ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಸೇರಿ ಇತರರ ಮೇಲೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್​ ಮಲ್ಲಿಕಾರ್ಜುನ್ ಅವರ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ.

    ಇದನ್ನೂ ಓದಿ: ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!

    ಎಫ್​ಐಆರ್​ ದಾಖಲಾಗುತ್ತಿದ್ದಂತೆ ಚುರುಕಾದ ಕೋಡಿಹಳ್ಳಿ ಚಂದ್ರಶೇಖರ್​ ಮತ್ತಿತರರು ಒಂದನೆಯ ಎಸಿಎಂಎಂ ಕೋರ್ಟ್​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಶಿವರಾಜ್​ ಮೂಲಕ ಜಾಮೀನು ಅರ್ಜಿ ಸಲ್ಲಿಸಲಾಗಿದೆ.

    ಏ.12ರಂದು ಮೈಸೂರು ಬ್ಯಾಂಕ್​ ವೃತ್ತದಲ್ಲಿ ಸಾರಿಗೆ ನೌಕರರ ಕುಟುಂಬಸ್ಥರ ಜತೆ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಲ್ಲದೆ, ಅವರೆಲ್ಲ ತಟ್ಟೆ-ಲೋಟ ಹಿಡಿದು ಮುಷ್ಕರ ನಡೆಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಪ್ರಚೋದಿಸಿದ್ದಾರೆ. ಆ ಮೂಲಕ ಇವರೆಲ್ಲ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಅಮ್ಮ ಸಾಯ್ತಿದಾರೆ ಎಂದು ಬೇಡ್ಕೊಂಡ್ರೂ ಒಂದ್ ಹಾಸಿಗೆ ಅರೇಂಜ್​ ಮಾಡೋಕ್​ ಆಗ್ತಿಲ್ಲ; ಪ್ಲೀಸ್​.. ಹೊರಗೆ ಹೋಗೋ ಮುಂಚೆ 100 ಸಲ ಯೋಚ್ನೆ ಮಾಡಿ..

    ಮಾಟ-ಮಂತ್ರಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ; ಕೊನೆಗೂ ಸಿಕ್ಕಿಬಿದ್ದ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts