ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!

young Girl
Published on

ಮೈಸೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಸಲಿಗೆ ಅದು ಅತ್ಯಾಚಾರ ಯತ್ನವೇ ಅಲ್ಲ, ಅದೊಂದು ಪ್ರೇಮ ಪುರಾಣ ಎಂಬ ಪೊಲೀಸ್​ ತನಿಖೆಯಲ್ಲಿ ಬಟಾಬಯಲಾಗಿದೆ.

28 ವರ್ಷದ ಸಂತ್ರಸ್ತೆಗೂ ಮತ್ತು 21 ವರ್ಷದ ಆರೋಪಿಗೂ ಮೊದಲೇ ಪರಿಚಯವಾಗಿತ್ತು. ಯುವಕ ಮತ್ತು ಯುವತಿ ನಡುವೆ ತುಂಬಾ ಸಲುಗೆ ಇದ್ದ ಕಾರಣ ಆರೋಪಿಯನ್ನು ಯುವತಿಯೇ ಹಾಸ್ಟೆಲ್​ಗೆ ಬರಲು ಹೇಳಿದ್ದಳು.

ಯಾರೂ ಇಲ್ಲದ ವೇಳೆ ಪ್ರೇಮಿಗಳು ಹಾಸ್ಟೆಲ್​ನಲ್ಲಿ ಒಟ್ಟಿಗಿದ್ದರು. ಆದರೆ, ಸಹಪಾಠಿಗಳು ಬಂದ ಕೂಡಲೇ ಯುವಕ ಎಸ್ಕೇಪ್ ಆಗಿದ್ದ. ಕ್ರೈಸ್ತ ಸಮುದಾಯದ ಹಿರಿಯರಿಗೆ ಗೊತ್ತಾದ್ರೆ ಮುಂದೆ ತೊಂದರೆ ಆಗುತ್ತೆ ಅಂತ ಪೊಲೀಸ್ ಕೇಸ್ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸುವುದಕ್ಕಾಗಿ ಯುವತಿಯೇ ಅತ್ಯಾಚಾರ ಯತ್ನ ಹಾಗೂ ಹಲ್ಲೆಯ ಕತೆಯನ್ನು ಎಣೆದಿದ್ದಾಳೆ. ನಾನು ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ನೀನು ತಪ್ಪಿಸಿಕೋ ಅಂತಾ ಮೊದಲೇ ಆರೋಪಿಗೆ ಯುವತಿ ಸುಳಿವು ಕೊಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಇಬ್ಬರ ಕಾಲ್​ ಲೀಸ್ಟ್​ ಮತ್ತು ಮೆಸೇಜ್​ ಲೀಸ್ಟ್​ ನೋಡಿದಾಗ ಇಬ್ಬರ ರಂಗಿನಾಟ ಬಯಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net