ಪಕ್ಕದ ಮನೆ ಯುವಕನ ಜತೆ ಅಕ್ರಮ ಸಂಬಂಧ: ಪತಿಯನ್ನು ಕೊಂದು ಹೃದಯಾಘಾತ ನಾಟಕವಾಡಿದ್ದ ಪತ್ನಿ ಅರೆಸ್ಟ್​

Wife Killed husband
Published on

ಮೈಸೂರು: ಪತಿಯ ಕತ್ತು ಹಿಸುಕಿ ಕೊಲೆ ಮಾಡಿ, ಹೃದಯಾಘಾತ ಎಂದು ಬಿಂಬಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ಹುಣಸೂರು ತಾಲ್ಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ.

ಲೋಕಮಣಿ (36) ಕೊಲೆಯಾದ ದುರ್ದೈವಿ. 9 ವರ್ಷಗಳ ಹಿಂದೆ ಲೋಕಮಣಿ, ಎಚ್.ಡಿ .ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ಶಿಲ್ಪಾಗೆ ಪಕ್ಕದ ಮನೆಯ ಅಭಿ ಎಂಬಾತನ ಜತೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ.

ಈ ವಿಚಾರ ಗಂಡನಿಗೆ ತಿಳಿದು, ಮನೆಯಲ್ಲಿ ಗಲಾಟೆ ನಡೆದಿದೆ. ಯಾರಿಗೂ ಹೇಳಬೇಡಿ ಅಂತಾ ಕ್ಷಮೆಯಾಚಿಸಿದ್ದ ಶಿಲ್ಪಾ, ಲೋಕಮಣಿ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಇದಾದ ಬಳಿಕ ಗಂಡ ಹೃದಯಘಾತದಿಂದ ಮೃತಪಟ್ಟಿದ್ದಾನೆಂದು ಬಿಂಬಿಸಿ, ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಳು.

ಘಟನೆ ನಡೆದ ಹಲವು ದಿನಗಳ ನಂತರ ಹುಣಸೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಶಿಲ್ಪಾಳನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಪಕ್ಕದ ಮನೆನ ಅಭಿ ಎಂಬಾತ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net