ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ: ತಂಗಿ ಗಂಡನ ಮೇಲಿನ ವ್ಯಾಮೋಹಕ್ಕೆ ನಡುರಾತ್ರಿ ನೆತ್ತರು ಹರಿಸಿದ ಹಂತಕಿ

Mandya Woman
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯವನ್ನು ಬೆಚ್ಚಿಬೀಳಿಸಿದ ನಾಲ್ವರು ಮಕ್ಕಳು ಸೇರಿ ಐವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಐವರನ್ನು ಕೊಂದಿದ್ದು ಯಾರೋ ಅಪರಿಚಿತರಲ್ಲ ದೊಡ್ಡಪ್ಪನ ಮಗಳಿಂದಲೇ ರಣಭೀಕರ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ತಂಗಿಯ ಗಂಡನ ಮೇಲಿನ ವ್ಯಾಮೋಹಕ್ಕೆ ಆಕೆಯನ್ನು ಕೊಲೆ ಮಾಡಿದ್ದಲ್ಲದೆ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಉಳಿದ ನಾಲ್ವರು ಮಕ್ಕಳನ್ನು ಪಾತಕಿ ಹತ್ಯೆಗೈದಿದ್ದಾಳೆ.

ಆರೋಪಿ ಲಕ್ಷ್ಮಿ (30) ಹಾಗೂ ಕೊಲೆಯಾದ ಲಕ್ಷ್ಮಿ (26) ಗಂಡ ಗಂಗಾರಾಮ್ ಜತೆ ವಿವಾಹೇತರ ಸಂಬಂಧವಿತ್ತು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ್ರೂ ಪರ ಪುರುಷನ ಮೇಲೆ ಆಕೆಗೆ ಮನಸ್ಸಾಗಿತ್ತು. ಆರು ತಿಂಗಳಿಂದ ಗಂಗಾರಾಮ್ ಜತೆ ಅಕ್ರಮ ಸಂಬಂಧವನ್ನು ಆರೋಪಿ ಆರಂಭಿಸಿದ್ದಳು.

ಹೆಂಡತಿಗೆ ಈ ವಿಚಾರ ತಿಳಿದ ಬಳಿಕ ಗಂಗಾರಾಮ್​ ಅಕ್ರಮ ಸಂಬಂಧ ಬಿಟ್ಪಿದ್ದ. ಆದರೆ, ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗು ಅಂತಾ ಗಂಗಾರಾಮ್​ನನ್ನು ಆರೋಪಿ ಪೀಡಿಸುತ್ತಿದ್ದಳು. ಇದೀಗ ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಅಮಾಯಕ ಜೀವಗಳನ್ನೇ ಇದೀಗ ಬಲಿ ಪಡೆದಿದ್ದಾಳೆ.

ಗಂಗಾರಾಮ್ ವ್ಯಾಪಾರಕ್ಕೆ ತೆರಳಿದಾಗ ತಂಗಿಯ ಕೊಲೆಗೆ ಪ್ಲಾನ್ ಮಾಡಿದ್ದಳು. ನಿನ್ನ ಜತೆ ಮಾತನಾಡಬೇಕೆಂದು ಘಟನೆ ನಡೆದ ದಿನ ರಾತ್ರಿ 9 ಗಂಟೆಗೆ ತಂಗಿಯ ಮನೆಗೆ ಬಂದಿದ್ದ ಹಂತಕಿ, ಮಧ್ಯರಾತ್ರಿ ಭೀಕರ ಕೊಲೆ ಮಾಡಿದ್ದಾಳೆ. ತಂಗಿ ಹಾಗೂ ಮಲಗಿದ್ದ ನಾಲ್ವರು ಮಕ್ಕಳನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದಿದ್ದಾಳೆ.

ಕೊಲೆ ಮಾಡಿದ ಬಳಿಕ ಮೂರ್ನಾಲ್ಕು ಗಂಟೆ ಶವಗಳೊಂದಿಗೆ ಇದ್ದು, ಬಳಿಕ ಮೈಸೂರಿನ ತನ್ನ ಮನೆಗೆ ತೆರಳಿದ್ದಳು. ಇದಾದ ನಂತರ 10 ಗಂಟೆಗೆ ಮೃತಳ ಮನೆಯ ಬಳಿ ಬಂದು ಅಮಾಯಕಿಯಂತೆ ಕಣ್ಣೀರಿಟ್ಟು ನಾಟಕ ಮಾಡಿದ್ದಳು.

ಒಂದೇ ದಿನ ಐವರು ಕೊಲೆಯಾಗಿದ್ದನ್ನು ನೋಡಿ ಮಂಡ್ಯ ಜನತೆಯೇ ಬೆಚ್ಚಿಬಿದ್ದಿತು. ಪೊಲೀಸರಿಗೂ ಇದು ತಲೆನೋವಾಗಿತ್ತು. ಇದೀಗ ಪ್ರಕರಣದ ಸತ್ಯಾಂಶ ತಿಳಿದ ಪೊಲೀಸರು ಶಾಕ್​ ಆಗಿದ್ದಲ್ಲದೆ, ಮಂಡ್ಯ ಜನತೆಯು ಬೆಚ್ಚಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net