More

    VIDEO: ಹೊಟ್ಟೆ-ಬಟ್ಟೆ ಕಟ್ಟಿ ಮಾಡಿದ ಆಸ್ತಿ ಬರೆದು ಕೊಟ್ಟರೂ ನಿಲ್ಲದ ದಾಹ: ಕೋಟಿ-ಕೋಟಿ ಆಸ್ತಿ ಒಡತಿ ಬೀದಿ ಪಾಲು!

    ಮಂಡ್ಯ: ಆಸ್ತಿಗಾಗಿ ನಡೆಯುವ ಕೊಲೆ, ಸುಲಿಗೆ, ಅಪರಾಧ ಕೃತ್ಯಗಳು ಅಷ್ಟಿಷ್ಟಲ್ಲ. ಕಷ್ಟಪಟ್ಟು ದುಡಿದು ಹೆತ್ತವರು ತಮ್ಮ ಮುಂದಿನ ವಂಶಕ್ಕೆ ಆಗಲಿ ಎಂದು ಆಸ್ತಿ ಮಾಡಿಟ್ಟರೆ ಅವರನ್ನೇ ವೃದ್ಧಾಪ್ಯದಲ್ಲಿ ಬೀದಿಗೆ ತಳ್ಳುವ ಅದೆಷ್ಟೇ ಘಟನೆಗಳು ನಡೆಯುತ್ತಲೇ ಇವೆ.

    ಅಂಥದ್ದೇ ಒಂದು ಘಟನೆ ಮಂಡ್ಯ ತಾಲೂಕಿನ ಕೊಣನಹಳ್ಳಿಯಲ್ಲಿ ನಡೆದಿದೆ. ಮಗ, ಸೊಸೆ, ಮೊಮ್ಮಕ್ಕಳು ಸೇರಿ ಅಜ್ಜಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದು, ಆಸ್ತಿಗಾಗಿ ಮಾನವೀಯತೆ ಮರೆತಿದ್ದಾರೆ. ಇದರಿಂದಾಗಿ ಈಗ ಕೋಟಿ-ಕೋಟಿ ಆಸ್ತಿ ಒಡತಿ ಇದೀಗ ಬೀದಿ ಪಾಲಾಗಿದ್ದಾರೆ.

    ನಿಂಗಮ್ಮ (85) ಎಂಬ ವೃದ್ಧೆಗೆ ಈ ಸ್ಥಿತಿ ಬಂದಿದೆ. ಮಕ್ಕಳಿಲ್ಲದ ಹಿನ್ನೆಲೆಯಲ್ಲಿ  ಬೋರೇಗೌಡ-ನಿಂಗಮ್ಮ ದಂಪತಿ ದತ್ತು ಪಡೆದುಕೊಂಡಿದ್ದರು. ಸಿದ್ದರಾಮೇಗೌಡ ಬೋರೇಗೌಡನ ಸಹೋದರನ ಮಗ. ಇವರಿಗೆ 16 ವರ್ಷವಿದ್ದಾಗಲೇ ದತ್ತು ಪಡೆದು ಶಿವಹಳ್ಳಿ ಗ್ರಾಮದ ನಾಗಮಣಿ 24 ವರ್ಷಕ್ಕೆ ಮದುವೆ ಮಾಡಲಾಗಿತ್ತು.

    ಮದುವೆಯಾದ 20 ವರ್ಷದ ನಂತರ ದತ್ತು ಮಗ ಸಿದ್ದರಾಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ನಿಂಗಮ್ಮ ಪತಿ ಬೋರೇಗೌಡ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಸಾಯುವ ಮುನ್ನ ಎಲ್ಲರಿಗೂ ಸಮನಾಗಿ ಆಸ್ತಿ ವಿಲ್ ಮಾಡಿಹೋಗಿದ್ದಾರೆ ಬೋರೇಗೌಡ. ಸೊಸೆ, ಮೊಮ್ಮಕ್ಕಳು, ಅಣ್ಣ, ತಮ್ಮಂದಿರಿಗೆ ಆಸ್ತಿಯಲ್ಲಿ ಸಮಪಾಲು ಮಾಡಿದ್ದಾರೆ.

    ಆದರೆ ಇಷ್ಟಕ್ಕೆ ತೃಪ್ತರಾಗದ ಸೊಸೆ ಮತ್ತು ಮೊಮ್ಮಕ್ಕಳು, ಇದೀಗ ಆಸ್ತಿಯಲ್ಲಾ ನಮಗೆ ಬೇಕು ಎನ್ನುತ್ತಿದ್ದಾರೆ. ಪತ್ರಗಳಿಗೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಸಹಿ ಹಾಕಲ್ಲ ಒಪ್ಪದಿದ್ದಾಗ ಮನೆಯಿಂದ ನಿಂಗಮ್ಮ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಹತ್ತಾರು ಎಕರೆ ಕೃಷಿ ಜಮೀನು, 15 ಸೈಟ್, ಏಳೆಂಟು ಮನೆ, ಮಂಡ್ಯ ನಗರ ಭಾಗದಲ್ಲಿ ಬಿಲ್ಡಿಂಗ್ ಇದ್ರೂ ಅಜ್ಜಿ ಬೀದಿ ಪಾಲಾಗಿದ್ದಾರೆ. ಹೊಟ್ಟೆ-ಬಟ್ಟೆ ಕಟ್ಟಿ ಆಸ್ತಿ ಮಾಡಿದ್ರೂ ಹೀಗೆ ಮಾಡ್ತಾ ಇದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ. ನನ್ನ ಗಂಡ ಎಲ್ಲರಿಗೂ ನ್ಯಾಯಕೊಡಿಸಬೇಕೆಂದು ವಿಲ್ ಮಾಡಿದ್ದಾರೆ. ಆದರೆ ಈಗ ಇವರು ನನ್ನ ಗಂಡನನ್ನು ಬೈಯ್ದುಕೊಂಡು ನನ್ನ ಬೀದಿ ಪಾಲು ಮಾಡಿದ್ದಾರೆ. ನಾನು ಆ ಮನೆಗೆ ಹೋಗಲ್ಲ, ನನ್ನ ಗಂಡ ಮಾಡಿರೋದು ಸರಿ ಎನ್ನುತ್ತಿದ್ದಾರೆ ನಿಂಗಮ್ಮ. (ದಿಗ್ವಿಜಯ ನ್ಯೂಸ್‌)

    ಆಫೀಸ್ ಕೆಲಸದ ಮೇಲೆ ಹೊರ ಹೋದಾಗಲೆಲ್ಲ ಅರಳುತ್ತಿದ್ದ ಗಂಡನ ಮುಖ: ಪತ್ನಿಗೆ ಬಂತು ಡೌಟ್‌- ಈಗ ಕಂಬಿ ಹಿಂದೆ ಪತಿ!

    ನ್ಯೂಯಾರ್ಕ್‌ ಶಾಲೆಗಳಲ್ಲಿ ಇನ್ಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ: ಶುರುವಾಯ್ತು ‘ವೆಗಾನ್‌ ಫ್ರೈಡೇ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts